Wednesday, July 2, 2025
spot_imgspot_img
spot_imgspot_img

ಉಡುಪಿ : ನಿಶ್ಚಿತಾರ್ಥಕ್ಕೆಂದು ಹೋದ ತಾಯಿ ಮಗಳು ನಾಪತ್ತೆ

- Advertisement -
- Advertisement -

ಉಡುಪಿ: ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಹೋದ ತಾಯಿ ಮಗಳು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದಲ್ಲಿ ನಡೆದಿದೆ.

ಮಂಗಳೂರು ಉಳ್ಳಾಲ ಬಂಡಿಕೊಟ್ಯ ನಿವಾಸಿ ಪ್ರಥ್ವಿನಿ (32) ಎಂಬ ಮಹಿಳೆಯು ತನ್ನ ನಾಲ್ಕೂವರೆ ವರ್ಷದ ಮಗಳಾದ ಪುನರ್ವಿಯೊಂದಿಗೆ ಮೇ 13ರಂದು ಬ್ರಹ್ಮಾವರ ತಾಲೂಕು ಹೇರೂರು ಗ್ರಾಮಕ್ಕೆ ನಿಶ್ಚಿತಾರ್ಥಕ್ಕೆ ಎಂದು ಬಂದಿದ್ದರು. ಹಾಗೇ ಬಂದವರು ನಾಪತ್ತೆಯಾಗಿದ್ದಾರೆ.

5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದಪ್ಪ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820 2561044, ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2561966 ಅನ್ನು ಸಂಪರ್ಕಿಸಬಹುದು ಎಂದು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!