Thursday, April 25, 2024
spot_imgspot_img
spot_imgspot_img

ಉಡುಪಿ : ಮನೆ ಕಳ್ಳತನ ಪ್ರಕರಣ; 24 ಗಂಟೆಯೊಳಗೆ ಪ್ರಕರಣ ಭೇಧಿಸಿದ ಪೊಲೀಸರು.!

- Advertisement -G L Acharya panikkar
- Advertisement -

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಒಬ್ಬಂಟಿಯಾಗಿದ್ದಾಗ ಕಳ್ಳನೊಬ್ಬ ನುಗ್ಗಿ ಚಿನ್ನದ ನೆಕ್ಲೇಸ್ ಕಳವು ಮಾಡಿ ಪರಾರಿಯಾಗಿದ್ದ,ಬ್ರಹ್ನಾವರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.

ಬ್ರಹ್ಮಾವರ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನಾಂಕ: 01-04-2022 ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ವಾಸು ಪೂಜಾರಿ ರವರ ಮನೆಯಲ್ಲಿ ಅವರ ಹೆಂಡತಿ ಪ್ರೇಮ ಮನೆಯಲ್ಲಿ ಒಂಟಿಯಾಗಿದ್ದು ಮನೆಯ ಹೊರಗಡೆ ಪಾತ್ರೆ ತೊಳೆಯುವಾಗ ಮನೆ ಹಿಂಬದಿ ಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿ ಮನೆಯನ್ನು ಜಾಲಾಡಿ ಸುಮಾರು 10 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಕಳವು ಮಾಡಿಕೊಂಡು ಹೋಗುವುದನ್ನು ಪ್ರೇಮರವರು ನೋಡಿ ತನ್ನ ಗಂಡನಿಗೆ ತಿಳಿಸಿ ಅದರಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಬಿದ್ದ ಪೊಲೀಸರು ವಿಶೇಷ ತಂಡ ರಚಿಸಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಯಾವುದೇ ತಾಂತ್ರಿಕ ಸಹಾಯವಿಲ್ಲದೆ ಕೇವಲ ಪೊಲೀಸ್ ಸಂಪ್ರದಾಯಿಕ ವಿಧಾನದಲ್ಲಿ ಸಾರ್ವಜನಿಕರಿಂದ ತಳಮಟ್ಟದ ಮಾಹಿತಿ ಸಂಗ್ರಹಿಸಿ ಆರೋಪಿಯು ಕಳವು ಮಾಡಿದ ದಿವಸ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು ಕೊನೆಗೂ ಆರೋಪಿಯನ್ನು ಪತ್ತೆ ಮಾಡಿ 50,000/- ರೂ ಬೆಲೆಬಾಳುವ ಚಿನ್ನದ ನೆಕ್ಲೇಸ್ ನ್ನು ವಶಪಡಿಸಿಕೊಂಡಿದ್ದಾರೆ . ಈ ಮೂಲಕ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣ ಭೇಧಿಸಿದಂತಾಗಿದೆ.

ಸುರೇಶ್ ಅಲಿಯಾಸ್ ಸೂರ್ಯ ಅಲಿಯಾಸ್ ಕಪಿ

ಆರೋಪಿನ್ನು ಯಶವಂತಪುರ, ಬೆಂಗಳೂರು ನಿವಾಸಿ ಸುರೇಶ್ @ ಸೂರ್ಯ @ ಕಪಿ (31) ಎನ್ನಲಾಗಿದೆ. ಈತನು ಮೂಲತಃ ಪೆಜಮಂಗೂರು ಗ್ರಾಮ ಪ್ರಗತಿ ನಗರ , ಬ್ರಹ್ಮಾವರ ತಾಲೂಕು ನವನಾಗಿರುತ್ತಾನೆ .ಈತನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕಳ್ಳತನದ ಪ್ರಕರಣದ ಆರೋಪಿಯಾಗಿದ್ದು , ತಾಮ್ರ , ಚಿನ್ನದ ಕಿವಿಯೋಲೆ , ಉಂಗುರ ಕಳವು ಮಾಡಿರುತ್ತಾನೆ. ಆರೋಪಿಯು ಕಾನೂನು ಸಂಘರ್ಷಗೊಳಲಾದ ಬಾಲಕನಾಗಿ 07 ವರ್ಷ ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ. ಪ್ರಸ್ತುತ ಆರೋಪಿತನು ಬೆಂಗಳೂರಿನ ಬಿ.ಬಿಎಂ.ಪಿ.ಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತಾನೆ.

- Advertisement -

Related news

error: Content is protected !!