Saturday, May 4, 2024
spot_imgspot_img
spot_imgspot_img

ಉತ್ತಮ ಆಡಳಿತದಲ್ಲಿ ಜಿಲ್ಲಾಡಳಿತಗಳ ಪಾತ್ರ ಮಹತ್ವದ್ದು; ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತು

- Advertisement -G L Acharya panikkar
- Advertisement -
suvarna gold

ದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜಿಲ್ಲಾಧಿಕಾರಿಗಳ ಜತೆ ವರ್ಚ್ಯುವಲ್​ ಸಂವಾದ ನಡೆಸಿದ್ದಾರೆ. ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳಿಂದ ನೇರವಾಗಿ ವರದಿ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಉತ್ತಮ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾಡಳಿತಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಅಷ್ಟೇ ಅಲ್ಲ, ಸರ್ಕಾರಗಳ ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತಗಳು ಸಹಾಯ ಮಾಡುತ್ತವೆ. ಹಾಗಾಗಿ, ಅಧಿಕಾರಿಗಳ ಕ್ಷೇತ್ರ ಭೇಟಿ ಮತ್ತು ಪರಿಶೀಲನೆ ಸಂಬಂಧ ಸವಿಸ್ತಾರವಾದ ಮಾರ್ಗಸೂಚಿ ತಯಾರಿಸಬೇಕಾದ ಅಗತ್ಯವಿದೆ ಎಂದೂ ಹೇಳಿದರು.

ನಮ್ಮ ದೇಶ ಜಿಲ್ಲಾಡಳಿತಗಳು ಮಹಾತ್ವಾಕಾಂಕ್ಷಿಯಾಗಿವೆ. ದೇಶವನ್ನು ಮುನ್ನಡೆಸುವಾಗ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತಗಳ ಹೊಂದಾಣಿಕೆ, ಟೀಂ ವರ್ಕ್​​ನಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗಳು ಉತ್ತಮವಾಗಿ ಆಗುತ್ತಿದೆ. ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಒಟ್ಟಾರೆ ಫಲಿತಾಂಶ ಅತ್ಯುತ್ತಮವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು. ಜನಸಾಮಾನ್ಯರ ಆಕಾಂಕ್ಷೆಗಳು ನಮ್ಮ ಆಕಾಂಕ್ಷೆಗಳಾದಾಗ, ಇನ್ನೊಬ್ಬರ ಕನಸುಗಳನ್ನು ನನಸಾಗಿಸುವುದೇ ನಮ್ಮ ಯಶಸ್ಸಿನ ಅಳತೆಗೋಲಾದಾಗ ಕರ್ತವ್ಯದ ಹಾದಿಯು ಇತಿಹಾಸ ನಿರ್ಮಿಸುತ್ತದೆ. ಅಂಥ ಇತಿಹಾಸವನ್ನು ನಾವಿಂದು ದೇಶದ ಬಹುತೇಕ ಜಿಲ್ಲೆಗಳಲ್ಲಿ ಸಾಧಿಸಿದ್ದೇವೆ ಎಂದೂ ಹೇಳಿದರು.

ಆಡಳಿತಗಳು ಮತ್ತು ಸಾರ್ವಜನಿಕರ ನಡುವೆ ಭಾವನಾತ್ಮಕ ಮತ್ತು ನೇರ ಸಂಪರ್ಕವಿರಬೇಕು. ಆಗ ಎಲ್ಲ ದಿಕ್ಕುಗಳಿಂದಲೂ ಅಭಿವೃದ್ಧಿ ಉತ್ತಮವಾಗಿ ಆಗುತ್ತದೆ. ಪ್ರತಿ ಜಿಲ್ಲಾ ಮಟ್ಟದಲ್ಲೂ ಯಶಸ್ಸು ಉಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಒಮ್ಮತವಾಗಿದೆ. ನಾಗರಿಕ ಸೇವೆಯಲ್ಲಿರುವ ನನ್ನೆಲ್ಲ ಸಹೋದ್ಯೋಗಿಗಳಿಗೆ ಒಂದು ಮಾತು ಹೇಳುತ್ತೇನೆ. ನೀವು ನಿಮ್ಮ ಕೆಲಸವನ್ನು ಪ್ರಾರಂಭ ಮಾಡಿದ ಮೊದಲ ದಿನ ನೆನಪಿಟ್ಟುಕೊಳ್ಳಬೇಕು. ನೀವು ಈ ದೇಶಕ್ಕಾಗಿ ಎಷ್ಟು ಶ್ರಮಿಸುತ್ತಿದ್ದೀರಿ, ಏನು ಕೆಲಸ ಮಾಡುತ್ತೀದ್ದೀರಿ ಎಂಬದನ್ನೂ ಅವಲೋಕನ ಮಾಡಿಕೊಳ್ಳುತ್ತಿರಬೇಕು. ನಿಮಗೆ ದೇಶಸೇವೆ ಮಾಡಲು ಎಷ್ಟು ಉತ್ಸಾಹವಿದೆ. ಎಷ್ಟುವರ್ಷಗಳಿಂದ ನಾಗರಿಕ ಸೇವೆ ಮಾಡುತ್ತಿದ್ದೀರಿ ಎಂಬುದನ್ನೂ ಗಮನಿಸಿಕೊಳ್ಳಿ. ಸೇವೆಯ ಕೊನೆ ದಿನದವರೆಗೂ ಅಷ್ಟೇ ಉತ್ಸಾಹದಿಂದ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ಇದೇ ವೇಳೆ ಜನಧನ್​ ಖಾತೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಜನಧನ್​ ಖಾತೆಗಳ ಸಂಖ್ಯೆ ದೇಶದ ಎಲ್ಲ ಜಿಲ್ಲೆಗಳಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕರಿಂದ ಐದುಪಟ್ಟು ಹೆಚ್ಚಾಗಿದೆ. ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಿದೆ ಎಂದು ಹೇಳಿದರು. ಹಾಗೇ, ಬಹುತೇಕವಾಗಿ ಪ್ರತಿಕುಟುಂಬದಲ್ಲೂ ಶೌಚಗೃಹ ನಿರ್ಮಾಣವಾಗಿದೆ. ಪ್ರತಿ ಗ್ರಾಮಕ್ಕೂ ವಿದ್ಯುತ್ ನೀಡಲಾಗಿದೆ. ಬಡಕುಟುಂಬಗಳಿಗೆ ಶಕ್ತಿ ನೀಡಲು ಶ್ರಮಿಸಲಾಗಿದೆ. ಹೀಗೆ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತಗಳು ತುಂಬ ನಿಷ್ಠೆಯಿಂದ ಕೆಲಸ ಮಾಡಿವೆ ಎಂದು ಶ್ಲಾಘಿಸಿದರು. ನರೇಗಾ ಮತ್ತಿತರ ಯೋಜನೆಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

- Advertisement -

Related news

error: Content is protected !!