Thursday, April 25, 2024
spot_imgspot_img
spot_imgspot_img

ಉದ್ಯಮಿಯೊಬ್ಬರ ಮನೆಯ ನೀರಿನ ಟ್ಯಾಂಕ್’ನಲ್ಲಿ ನೋಟಿನ ಕಂತೆ

- Advertisement -G L Acharya panikkar
- Advertisement -
vtv vitla
vtv vitla

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೂಪಾಲ್​ನ ಮದ್ಯ ಉದ್ಯಮಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ಕೋಟಿ ರೂ.ನಷ್ಟು ಹಣ, 3 ಕೆಜಿ ಬಂಗಾರ ದೊರಕಿದೆ. ಉದ್ಯಮಿ ಶಂಕರ್​​ ರೈ ಮತ್ತು ಅವರ ಕುಟುಂಬದವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಅಚ್ಚರಿಯ ಸಂಗತಿ ಎಂದರೆ ಶಂಕರ್​ ರೈ ಒಂದು ಕೋಟಿಯಷ್ಟು ಹಣವನ್ನು ಅಂಡರ್​ ಗ್ರೌಂಡ್​ನಲ್ಲಿರುವ ನೀರಿನ ಟ್ಯಾಂಕ್​ನಲ್ಲಿ ಬಚ್ಚಿಟ್ಟಿದ್ದರು. ಮನೆಯನ್ನು ಜಾಲಾಡಿದ ಅಧಿಕಾರಿಗಳು ಟ್ಯಾಂಕ್​ನಲ್ಲಿ ಬಚ್ಚಿಟ್ಟ ಹಣವನ್ನೂ ಹೊರತೆಗೆದಿದ್ದಾರೆ. ಆದರೆ ನೋಟುಗಳು ನೀರಿನಲ್ಲಿ ಒದ್ದೆಯಾಗಿದ್ದವು. ಹೀಗಾಗಿ ಅಧಿಕಾರಿಗಳು ಒಂದು ಕೋಟಿರೂ ಮೌಲ್ಯದ ನೋಟುಗಳನ್ನು ಹೇರ್​ ಡ್ರೈಯರ್​ ಮತ್ತು ಇಸ್ತ್ರಿ ಪೆಟ್ಟಿಗೆ ಮೂಲಕ ಒಣಗಿಸಿದ್ದಾರೆ.

vtv vitla

ಅಧಿಕಾರಿಗಳು ಹೇರ್​ ಡ್ರೈಯರ್​ ಮತ್ತು ಇಸ್ತ್ರಿಪೆಟ್ಟಿಗೆ ಉಪಯೋಗಿಸಿ ನೋಟುಗಳನ್ನು ಒಣಗಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ದಾಳಿಯಲ್ಲಿ ಸಿಕ್ಕ ಆಸ್ತಿಯ ಬಗ್ಗೆ ಮಾಹಿತಿ ನೀಡಿದ ಜಬಲ್ಪುರದ ಆದಾಯ ತೆರಿಗೆ ಇಲಾಖೆಯ ಕಮಿಷನರ್​ ತನಿಖೆಯ ವೇಳೆ 8 ಕೋಟಿ ಮೌಲ್ಯದ ಹಣ, 3 ಕೆಜಿ ಬಂಗಾರ ದೊರಕಿದೆ.

ಅದರಲ್ಲಿ ಒಂದು ಕೋಟೊ ಹಣವನ್ನು ನೀರಿನ ಟ್ಯಾಂಕ್​ನಿಂದ ಹೊರತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 39 ಗಂಟೆಗಳ ನಿರಂತರ ವಿಚಾರಣೆ ನಡೆಸಿದ ಅಧಿಕಾರಿಗಳ ತಂಡ ಭೌತಿಕ ವಿಚಾರಣೆ ಮುಗಿದಿದೆ. ಇನ್ನು ದಾಖಲೆಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!