Wednesday, July 9, 2025
spot_imgspot_img
spot_imgspot_img

ಉಪಿನಂಗಡಿ: ಹಿಂಸಾತ್ಮಕವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ; ಉಪ್ಪಿನಂಗಡಿ ಪೊಲೀಸರಿಂದ ದಾಳಿ; ಆರೋಪಿ ಸಹಿತ ವಾಹನ ವಶಕ್ಕೆ

- Advertisement -
- Advertisement -

ಉಪ್ಪಿನಂಗಡಿ: ಅಕ್ರಮ ಗೋ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಮತ್ತು ವಾಹನವನ್ನು ವಶಕ್ಕೆ ಪಡೆದು ಜಾನುವಾರುವನ್ನು ರಕ್ಷಿಸಿದ ಘಟನೆ ಅ.31 ರಂದು ಉಪ್ಪಿನಂಗಡಿಯ ನೂಜಿ ಝಕಾರಿಯಾ ಅಶ್ವಿರ್ ಕಾಂಪೌಂಡ್ ಮುಂಭಾಗ ನಡೆದಿದೆ.

ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ಅಬ್ದುಲ್ ರಹಿಮಾನ್ (ಪಿಸ್ತೂಲ್) (40) ಬಂಧಿತ ಆರೋಪಿ.

ಅ.31 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಆಟೋ ರಿಕ್ಷಾವನ್ನು ನಿಲ್ಲಿಸಿ ಪರಿಶೀಲಿಸಿದಾಗ ಪ್ರಯಾಣಿಕರ ಸೀಟಿನ ಬದಿಯ ಟರ್ಪಾಲ್ ನ್ನು ಸರಿಸಿ ನೋಡಿದಾಗ ಅಟೋರಿಕ್ಷಾದ ಪ್ರಯಾಣಿಕರು ಕಾಲಿಡುವ ಸ್ಥಳದಲ್ಲಿ ಒಂದು ದನದ ಕರುವನ್ನು ಹಗ್ಗದಲ್ಲಿ ಕುತ್ತಿಗೆಗೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆತನು ದನದ ಮಾಂಸಕ್ಕಾಗಿ ಕರುವನ್ನು ವಧೆ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ದನದ ಕರುವನ್ನು ಇದರ ಅಂದಾಜು ಮೌಲ್ಯ ರೂ 2500/- ಮತ್ತು ದನದ ಕರುವನ್ನು ಸಾಗಾಟ ಮಾಡಿದ ಅಟೋ ರಿಕ್ಷಾವನ್ನು ಇದರ ಅಂದಾಜು ಮೌಲ್ಯ ರೂ 1,00,000,/ ಆಗಬಹುದು. ಈ ಸೊತ್ತುಗಳನ್ನು ಮಹಜರು ಮುಖೇನಾ ಬರೆದು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಯಿತು.

ಸ್ವಾಧೀನಪಡಿಸಿದ ದನದ ಕರು ಮತ್ತು ಅಟೋರಿಕ್ಷಾದ ಸದಾ ನಿಮ್ಮೊಂದಿಗೆ ಒಟ್ಟು ಮೌಲ್ಯ 1,02,500/- ಆಗಬಹುದು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. 116/2022 eo: 5 7 12 (2) KARNATAKA PREVENTION OF SLAUGHTER AND PRESERVATION OF CATTLE ACT-2020, 11 (1) (D) PREVENTION OF CRUELTY TO ANIMALS ACT And U/s 66(1), R/w 192 (A) IMV do ಪ್ರಕರಣ ದಾಖಲಾಗಿದೆ.

ಕಾರ್ಯಕಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಜೇಶ್ ಕೆ.ವಿ., ಸಿಬ್ಬಂದಿಗಳಾದ ರುದ್ರಪ್ಪ, ಪ್ರತಾಪ್ ರೆಡ್ಡಿ, ಚಾಲಕರಾದ ಮುಸ್ತಾ‌ ಪಾಲ್ಗೊಂಡಿದ್ದರು.

- Advertisement -

Related news

error: Content is protected !!