Sunday, May 5, 2024
spot_imgspot_img
spot_imgspot_img

ಉಳ್ಳಾಲ: ಓವರ್‌ಟೇಕ್‌ ಭರದಲ್ಲಿ ವಿದ್ಯಾರ್ಥಿ ಮೇಲೆ ಹರಿದ ಕಾರು; ತನ್ನದಲ್ಲದ ತಪ್ಪಿಗೆ ಹಾರಿಹೋಯಿತು ಬಾಲಕನ ಪ್ರಾಣಪಕ್ಷಿ

- Advertisement -G L Acharya panikkar
- Advertisement -
vtv vitla

ಉಳ್ಳಾಲ: ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದ ಕಾರೊಂದು ಸ್ಕೂಟರ್, ರಿಕ್ಷಾಕ್ಕೆ ಡಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಮುಡಿಪು ಜಂಕ್ಷನ್‌ನಲ್ಲಿ ನಡೆದಿದೆ.

ಬೋಳಿಯಾರು ಗ್ರಾಮದ ಬಟ್ರಬೈಲು ನಿವಾಸಿ ಹರಿಶ್ಚಂದ್ರ ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಮೃತ ಬಾಲಕ.

ಮೃತ ಕಾರ್ತಿಕ್ ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದ ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಮುಡಿಪು ಕಡೆಗೆ ತೆರಳುತ್ತಿದ್ದ ಬ್ರಿಝ್ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ತಂಗುದಾಣದಲ್ಲಿ ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದ ಕಾರು ಬಾಲಕನ ಮೇಲೆರಗಿದೆ.

ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ನಾಳೆ ಹೊಸ ಬ್ರಿಝಾ ಕಾರು ಬರಲಿದ್ದು ಸ್ನೇಹಿತನ ಬ್ರಿಝಾ ಕಾರಲ್ಲಿ ಚಾಲನೆ ಕಲಿಯುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!