Tuesday, July 1, 2025
spot_imgspot_img
spot_imgspot_img

ಎಂಟು ತಿಂಗಳ ಮಗುವಿನ ಶ್ವಾಸಕೋಶದಲ್ಲಿ ಕಾಲುಂಗುರ ಪತ್ತೆ

- Advertisement -
- Advertisement -

ಎಂಟು ತಿಂಗಳ ಮಗುವೊಂದು ತಾಯಿಯ ಕಾಲುಂಗುರ ನುಂಗಿದ ಪರಿಣಾಮ ಅದು ಶ್ವಾಸಕೋಶದಲ್ಲಿ ಸಿಲುಕಿಕೊಂಡ ಘಟನೆ ಬಾರಾಮತಿಯಲ್ಲಿ ನಡೆದಿದೆ. ಸದ್ಯ ಶಸ್ತ್ರಚಿಕಿತ್ಸೆ ಮೂಲಕ ಕಾಲುಂಗುರವನ್ನು ಹೊರ ತೆಗೆಯಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಕಾರ್ತಿಂಗ್ ಸಿಂಗ್ ಎಂಬ ಎಂಟು ತಿಂಗಳ ಬಾಲಕ ಇದ್ದಕ್ಕಿದ್ದಂತೆ ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ್ದ. ಅಲ್ಲದೆ ಇತರ ಆಹಾರ ಸೇವನೆಯನ್ನೂ ಮಾಡದೆ ಹಸಿವಿನಿಂದ ಒಂದೇ ಸಮನೆ ಅಳುತ್ತಿದ್ದ. ಜೊತೆಗೆ ನೋವಿನಿಂದ ಬಳಲುತ್ತಿದ್ದ. ಮಗುವಿಗೆ ಏನಾಯಿತೆಂದಬ ಆತಂಕದಿಂದ ಪಾಲಕರು ಆಸ್ಪತ್ರೆಗೆ ಕರೆದೊಯ್ದರೆ ವೈದ್ಯರು ಮಾತ್ರೆ ನೀಡಿದ್ದಾರೆ. ಆದರೆ ಬಾಲಕನ ಪರಿಸ್ಥಿತಿ ಸುಧಾರಿಸಲಿಲ್ಲ.

ಕೂಡಲೇ ಇನ್ನೊಂದು ವೈದ್ಯರ ಬಳಿ ತೆರಳಿ ಎಕ್ಸ್‌ರೇ ಮಾಡಿಸಿದಾಗ ಶ್ವಾಸಕೋಶದಲ್ಲಿ ಗೋಲಾಕಾರದ ವಸ್ತುವೊಂದು ಸಿಲುಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸನಾಳದಿಂದ ಆ ವಸ್ತುವನ್ನು ಹೊರ ತೆಗೆದಿದ್ದಾರೆ. ಅದು ತಾಯಿಯ ಕಾಲುಂಗುರವಾಗಿತ್ತು. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದಿನಗಳೆದಿದ್ದರೆ ಬಾಲಕನ ಪ್ರಾಣಕ್ಕೇ ಕುತ್ತು ಉಂಟಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಕಾಲುಂಗುರ ಕಾಣೆಯಾಗಿದ್ದು, ಎಲ್ಲೂ ಸಿಕ್ಕಿರಲಿಲ್ಲ. ಎಲ್ಲೋ ಕಳೆದು ಹೋಗಿರಬಹುದೆಂದು ಸುಮ್ಮನಾಗಿದ್ದೆ. ಆದರೆ ಮಗು ಅದನ್ನು ಬಾಯೊಳಗೆ ಹಾಕಿಕೊಂಡಿದ್ದು ಗೊತ್ತೇ ಆಗಿರಲಿಲ್ಲ ಎಂದು ತಾಯಿ ಪ್ರತಿಕ್ರಿಯಿಸಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!