Friday, May 3, 2024
spot_imgspot_img
spot_imgspot_img

ಎನ್‌ಐಎ ಅಧಿಕಾರಿಯ ಹತ್ಯೆ; ಅಪರಾಧಿಗಳಿಗೆ ಗಲ್ಲು ಶಿಕ್ಷೆ

- Advertisement -G L Acharya panikkar
- Advertisement -

ಬಿಜ್ನೋರ್‌: 2016ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿ ತೆಂಜಿಲ್‌ ಅಹ್ಮದ್ ಹಾಗೂ ಅವರ ಪತ್ನಿ ಫಾರ್ಜಾನಾ ಅವರ ಹತ್ಯೆಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.‌

2016 ಏಪ್ರಿಲ್‌ 2ರ ಮಧ್ಯರಾತ್ರಿ ಈ ಹತ್ಯೆ ನಡೆದಿತ್ತು. ಇಂಡಿಯನ್ ಮುಜಾಹಿದೀನ್‌ಗೆ ಸಂಬಂಧಿಸಿದ ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿ ತಂಜಿಲ್ ಅಹ್ಮದ್ ಅವರು 2016ರ ಏಪ್ರಿಲ್ 2 ಮತ್ತು 3ರ ಮಧ್ಯರಾತ್ರಿ ದೆಹಲಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಕಾರನ್ನು ನಿಲ್ಲಿಸಿ ಅವರ ಇಬ್ಬರು ಮಕ್ಕಳು ಮುಂದೆಯೇ ಗುಂಡಿಕ್ಕಿ ಕೊಂದಿದ್ದರು.

ಅಪರಾಧಿಗಳಾದ ಮುನೀರ್‌ ಹಾಗೂ ಆತನ ಸಹಚರ ರಾಯನ್‌ ಎಂಬುವವರಿಗೆ ಉತ್ತರಪ್ರದೇಶದ ಬಿಜ್ನೋರ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯ್ ಕುಮಾರ್‌ ಅವರು ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಸದ್ಯ ಇಬ್ಬರೂ ಸೋನಭದ್ರ ಜೈಲಿನಲ್ಲಿದ್ದಾರೆ..

ಈ ಬಗ್ಗೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ವರಿಷ್ಠಾಧಿಕಾರಿ ಧರಂವೀರ್ ಸಿಂಗ್‌, ‘ತನಿಖೆಯ ವೇಳೆ, ಕೊಲೆಯಲ್ಲಿ ಮುನೀರ್, ರಾಯನ್, ಜೈನಿ, ತಂಜಿಮ್ ಅಹಮದ್ ಮತ್ತು ರಿಜ್ವಾನ್ ಪಾತ್ರವಿರುವುದು ಕಂಡುಬಂದಿತ್ತು, ಎಲ್ಲಾ ಆರೋಪಿಗಳು ಎನ್ಐಎ ಅಧಿಕಾರಿಯ ನೆರೆಹೊರೆಯವರಾಗಿದ್ದು, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಪ್ರಕರಣದಲ್ಲಿ 19 ಪ್ರಾಸಿಕ್ಯೂಷನ್ ಸಾಕ್ಷಿಗಳ ಆಧಾರದಲ್ಲಿ ಮುನೀರ್ ಮತ್ತು ರಾಯನ್ ಅವರನ್ನು ದೋಷಿಗಳೆಂದು ತೀರ್ಪು ನೀಡಿ ಜೈನಿ, ತಂಜಿಮ್ ಅಹ್ಮದ್ ಮತ್ತು ರಿಜ್ವಾನ್ ಅವರನ್ನು ಖುಲಾಸೆಗೊಳಿಸಿದೆ ಎಂದು ಸಿಂಗ್ ಹೇಳಿದರು.

- Advertisement -

Related news

error: Content is protected !!