Wednesday, June 24, 2026
spot_imgspot_img
spot_imgspot_img

ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ: ಆರು ಮಂದಿಯ ಬರ್ಬರ ಹತ್ಯೆ- ಆರೋಪಿ ನಾಪತ್ತೆ!

- Advertisement -
- Advertisement -

ಆಂಧ್ರಪ್ರದೇಶ : ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ಭುಗಿಲೆದ್ದು ವ್ಯಕ್ತಿ ಯೋರ್ವ 6 ತಿಂಗಳ ಮಗು ಸೇರಿದಂತೆ 6 ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ವಿಶಾಖಪಟ್ಟಣಂ ನಲ್ಲಿ ನಡೆದಿದೆ.

ವಿಶಾಖಪಟ್ಟಣಂನ ಪೆಂಡೂರ್ತಿ ಮಂಡಲದ ಜುಟ್ಟಾಡ ಎಂಬಲ್ಲಿ ಬಟಿನಾ ಅಪ್ಪಲರಾಜು ಎಂಬಾತ ಮಧ್ಯರಾತ್ರಿಯಲ್ಲಿ ಕೃತ್ಯ ಎಸಗಿದ್ದಾನೆ. ಮೃತರನ್ನು ಬಮ್ಮಿಡಿ ರಮಣ (63), ಬಮ್ಮಿಡಿ ಉಷರಾಣಿ (35) ಅಲ್ಲೂರಿ ರಮಾದೇವಿ (53), ನಕೆಟ್ಲಾ ಅರುಣಾ (37) ಬಮ್ಮಿಡಿ ಉದಯ್ (2), ಬಮ್ಮಿಡಿ ಉರ್ವಿಶಾ (6 ತಿಂಗಳು) ಎಂದು ಗುರುತಿಸಲಾಗಿದೆ.

ಎರಡು ಕುಟುಂಬಗಳ ನಡುವೆ ಇದ್ದ ಆಸ್ತಿ ವಿವಾದಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ಅಪ್ಪಲರಾಜು ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!