Friday, May 10, 2024
spot_imgspot_img
spot_imgspot_img

ಎಸ್‌ಬಿಐ ಶಾಖೆಯಲ್ಲಿ ಚಾಕು ತೋರಿಸಿ ಲಕ್ಷಾಂತರ ರೂ ದರೋಡೆ; 2 ದಿನದಲ್ಲಿ ಹಸೆಮಣೆ ಏರಬೇಕಿದ್ದವ ಪೊಲೀಸ್ ಮೆಟ್ಟಿಲೇರಿದ!

- Advertisement -G L Acharya panikkar
- Advertisement -
vtv vitla
vtv vitla

ಹುಬ್ಬಳ್ಳಿ: ಎಸ್‌ಬಿಐ ಶಾಖೆಯಲ್ಲಿ ಚಾಕು ತೋರಿಸಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರವೀಣ್‌ಕುಮಾರ ಅಪ್ಪಾಸಾಹೇಬ ಪಾಟೀಲ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಡುಹಗಲೇ ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿದ್ದ ಆರೋಪಿ ಈಗ ಅರೆಸ್ಟ್ ಆಗಿದ್ದಾನೆ. ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿ ಬಲೆಗೆ ಬಿದ್ದಿದ್ದಾನೆ.

ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಎಸ್ಬಿಐ ಬ್ಯಾಂಕ್‌ನಲ್ಲಿ ಕ್ಯಾಶಿಯರ್‌ಗೆ ಚಾಕು ತೋರಿಸಿ 6.39 ಲಕ್ಷ ರೂ. ದರೋಡೆ ಮಾಡಲಾಗಿತ್ತು. ನಿನ್ನೆ(ಜ.18) ಸಂಜೆ ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್ನ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಗೆ ಚಾಕು ತೋರಿಸಿ ಬರೋಬ್ಬರಿ 6.39 ಲಕ್ಷ ಹಣ ದೋಚಿ ಆರೋಪಿ ಪ್ರವೀಣ್‌ಕುಮಾರ ಪರಾರಿ ವೇಳೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸಿನಿಮೀಯ ರೀತಿಯಲ್ಲಿ ಹಣ ದೋಚಲು ಯತ್ನಿಸಿದವನನ್ನು ಸಿನಿಮೀಯ ರೀತಿಯಲ್ಲೇ ಹುಬ್ಬಳ್ಳಿ ಪೊಲೀಸರು ಹಿಡಿದಿದ್ದಾರೆ.

vtv vitla
vtv vitla

2 ದಿನದಲ್ಲಿ ಹಸೆಮಣೆ ಏರಬೇಕಿದ್ದ ಆರೋಪಿ ಅರೆಸ್ಟ್ ಇನ್ನು ದರೋಡೆ ಮಾಡಿ ಸಿಕ್ಕಿಬಿದ್ದ ಆರೋಪಿ ಪ್ರವೀಣ್‌ಕುಮಾರ ಎರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ವರ. ಆದ್ರೆ ಇವ ಏರಿದ್ದು ಪೊಲೀಸ್ ಠಾಣೆ ಮೆಟ್ಟಿಲು. ಸಾರ್ವಜನಿಕರ ಸಹಾಯದಿಂದ ಕ್ಷಣಾರ್ಧದಲ್ಲೇ ಖದೀಮನನ್ನ ಪೊಲೀಸರು ಹಿಡಿದಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಬಂಗಾರಿ ಹಾಗೂ ಉಪನಗರ ಪೊಲೀಸ್ ಠಾಣೆ ಪೇದೆ ಮಂಜುನಾಥ್ ಹಾಲವರ ಎಂಬ ಸಿಬ್ಬಂದಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಖದೀಮನನ್ನ ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬೂ ರಾಮ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನ ಹಿಡಿದು ಸಾಹಸ ಮೆರೆದ ಸಿಬ್ಬಂದಿಗೆ ತಲಾ 25 ಸಾವಿರ ಬಹುಮಾನ ನೀಡಿ ಅಭಿನಂದಿಸಿದ್ದಾರೆ. ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suvarna gold
- Advertisement -

Related news

error: Content is protected !!