Sunday, May 5, 2024
spot_imgspot_img
spot_imgspot_img

(ಎ.22) ಕನ್ನಡ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕ ಸಂಯೋಜನೆಯಲ್ಲಿ ಜಾನಪದ-ದೈವಾರಾಧನೆ ಬಗ್ಗೆ ವಿಚಾರ ಗೋಷ್ಠಿ

- Advertisement -G L Acharya panikkar
- Advertisement -

ಕನ್ನಡ ಜಾನಪದ ಪರಿಷತ್‌ ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಸಂಯೋಜನೆಯಲ್ಲಿ ಎ.22ರಂದು ಮುಂಬೈಯ ಸಯನ್‌ ಪಶ್ಚಿಮದಲ್ಲಿ ಇರುವ ಸ್ವಾಮಿ ನಿತ್ಯಾನಂದ ಹಾಲ್‌ನಲ್ಲಿ “ಜಾನಪದ-ದೈವರಾಧನೆ ಬಗ್ಗೆ ವಿಚಾರ ಗೋಷ್ಠಿಯನ್ನು ಆಯೋಜನೆ ಮಾಡಲಾಗಿದೆ.

ಈ ಗೋಷ್ಠಿಯಲ್ಲಿ ದ.ಕ ಜಿಲ್ಲೆಯ ನಟ, ನಿರ್ಮಾಪಕ, ವಿರ್ಮಶಕ, ಸಾಂಸ್ಕೃತಿಕ ಚಿಂತಕ ತಮ್ಮಣ್ಣ ಶೆಟ್ಟಿ ಹಾಗೂ ದೈವಾರಾಧನೆಯ ಪಾಡ್ದನ ಸಂಶೋಧಕ ವಿಜಯನ್‌ ಕಾಸರಗೋಡು ಭಾಗವಹಿಸಿ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೊಂಬೆ ಬಂಟ್ಸ್‌ ಅಸೋಸಿಯೇಶನ್ಸ್‌ ಅಧ್ಯಕ್ಷ ಸುರೇಂದ್ರ ಕೆ.ಶೆಟ್ಟಿ, ಬಂಟರ ಸಂಘ ಬಂಟರವಾಣಿಯ ಕಾರ್ಯಾಧ್ಯಕ್ಷ ರವೀಂದ್ರ ಭಂಡಾರಿ, ಜಿ.ಎಸ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನ ಕಾರ್ಯಾಧ್ಯಕ್ಷ ಶಂಕರ್‌ ಎ ಶೆಟ್ಟಿ, ಹೋಟೇಲ್‌ ಉದ್ಯಮಿ ಜಯಪ್ರಕಾಶ್‌ ಶೆಟ್ಟಿಯವರು ಭಾಗವಹಿಸಲಿದ್ದಾರೆ. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ತುಳುನಾಡಿನ ದೈವಾರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಯೆಯ್ಯಾಡಿ, ಮುಖ್ಯ ಸಲಹೆಗಾರ, ಪತ್ರಕರ್ತ ಚಂದ್ರಶೇಖರ್‌ ಪಾಲೆತ್ತಾಡಿ, ಗೌರವ ಕಾರ್ಯದರ್ಶಿ ಉದಯ ಶೆಟ್ಟಿ, ಗೌರವ ಕೋಶಾಧಿಕಾರಿ ಸುಂದರ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!