Friday, May 17, 2024
spot_imgspot_img
spot_imgspot_img

ಏಡ್ಸ್​ ರೋಗಿಯಲ್ಲಿ ರೂಪಾಂತರಗೊಂಡ ಕೊರೊನಾ; ಹೊಸ ಮ್ಯೂಟಂಟ್​​ ಬಗ್ಗೆ ಕಟ್ಟೆಚ್ಚರ

- Advertisement -G L Acharya panikkar
- Advertisement -
vtv vitla
vtv vitla

ಏಡ್ಸ್​ ರೋಗಿಯಲ್ಲಿ ಮೊದಲ ಬಾರಿ ಕಂಡುಬಂದಿರುವ B.1.1.529 ಅಲಿಯಾಸ್ ಒಮಿಕ್ರಾನ್ ಹೆಸರಿನ ಮ್ಯೂಟಂಟ್ ಕೊರೊನಾ ವೈರಸ್​ ಈಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 9 ರಂದು ಕೊರೊನಾ ಸೋಂಕಿತನ ಸ್ಯಾಂಪಲ್ಸ್​​​ಗಳನ್ನು ಪಡೆಯಲಾಗಿತ್ತು. ಬಳಿಕ ಅದನ್ನು ಜಿನೊಮಿಕ್ ಸ್ಟಡಿಗೆ ಒಳಪಡಿಸಿದಾಗ ಮೊದಲ ಬಾರಿ ನವೆಂಬರ್ 24ರಂದು ಹೊಸ ತಳಿ ಇರೋದು ದೃಢಪಟ್ಟಿತ್ತು. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಈ ತಳಿ ಸಾಕಷ್ಟು ವೇಗವಾಗಿ ಹರಡುತ್ತಿದೆ. ಇದೇ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆ ಈ ತಳಿಯನ್ನು ವೇರಿಯಂಟ್ ಆಫ್ ಕನ್ಸರ್ನ್ ಎಂದು ಕರೆದಿದೆ.

ಹೀಗಾಗಿ ಕೊರೊನಾ ರೂಪಾಂತರಿ ಒಮಿಕ್ರಾನ್​ ಇಡೀ ವಿಶ್ವವನ್ನ ಮತ್ತೆ ತಲ್ಲಣಗೊಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಈ ತಳಿ, ಸದ್ಯ ಬ್ರಿಟನ್​, ಜರ್ಮನಿ ಸೇರಿ ವಿಶ್ವದ 9 ರಾಷ್ಟ್ರಗಳಲ್ಲಿ ಕಂಡು ಬಂದಿದೆ. ಹೀಗಾಗಿಯೇ ಇಸ್ರೇಲ್ ಸಂಪೂರ್ಣ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನವನ್ನು ನಿಷೇಧಿಸಿದ್ದರೆ, ಅಮೆರಿಕಾ ಹಾಗೂ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ಸೇರಿ ಸುಮಾರು 14 ಆಫ್ರಿಕನ್ ರಾಷ್ಟ್ರಗಳಿಗೆ ನಿಬಂಧನೆಯನ್ನು ಹೇರಿವೆ. ಈ ನಿಟ್ಟಿನಲ್ಲಿ ಭಾರತದಲ್ಲಿಯೂ ಹೈ ಅಲರ್ಟ್​ ಘೋಷಿಸಲಾಗಿದೆ.

ಒಮಿಕ್ರಾನ್​ ಕಂಟ್ರೋಲ್​ಗೆ ಭಾರತದ ಕ್ರಮ

  • ಒಮಿಕ್ರಾನ್​ ಕಂಟ್ರೋಲ್​ಗೆ ಭಾರತ ಹಲವು ನಿಯಮ ಜಾರಿ
  • ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣೀಕರಿಗೆ ತಪಾಸಣೆ
  • ಮ್ಯೂಟಂಟ್​ ಲಕ್ಷಣ ಕಂಡು ಬಂದರೆ ಕೂಡಲೇ ಕ್ವಾರಂಟೀನ್​
  • ವಿದೇಶಿ ಪ್ರಯಾಣಿಕರ ನಿಕಟ ಸಂಪರ್ಕಿತರ ಮೇಲೆಯೂ ನಿಗಾ
  • ದಕ್ಷಿಣ ಆಫ್ರಿಕಾದಿಂದ ಬರುವ ವಿಮಾನಯಾನ ಬಂದ್​ ಆಗಿದೆ
  • ವಿಮಾನಯಾನ ಸ್ಥಗಿತಕ್ಕೆ ದಕ್ಷಿಣ ಆಫ್ರಿಕಾ ಸಹಜ ಆಕ್ರೋಶ ವ್ಯಕ್ತ
vtv vitla
vtv vitla
- Advertisement -

Related news

error: Content is protected !!