Thursday, March 28, 2024
spot_imgspot_img
spot_imgspot_img

ಐಪಿಎಸ್ v/s ಐಎಎಸ್ ಅಧಿಕಾರಿಗಳ ಜಡೆಜಗಳ ; ಮೂವರು ಅಧಿಕಾರಿಗಳ ಎತ್ತಂಗಡಿ ಮಾಡಿ ಬಿಸಿ ಮುಟ್ಟಿಸಿದ ಸರ್ಕಾರ

- Advertisement -G L Acharya panikkar
- Advertisement -

ಬೆಂಗಳೂರು: ಐಪಿಎಸ್ ವರ್ಸಸ್ ಐಎಎಸ್ ಜಟಾಪಟಿ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದ್ದು, ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆಗೊಳಿಸಲು ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಂಬಂಧಿಸಿ ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಡಿ. ರೂಪಾ ಕರಕುಶಲ ಅಭಿವೃದ್ಧಿ ನಿಗಮ ಎಂ.ಡಿಯಾಗಿದ್ದರು ಹಾಗೂ ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದರು. ಇವರ ಜೊತೆಗೆ ರೂಪಾ ಅವರ ಪತಿ ಐಎಎಸ್ ಅಧಿಕಾರಿ ಮುನೀಷ್ ಮೌದ್ಗಿಲ್‍ರನ್ನು ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ.

ಹೆಚ್.ಬಸವರಾಜೇಂದ್ರ ಅವರನ್ನು ರೋಹಿಣಿ ಅವರ ಸ್ಥಾನಕ್ಕೆ ನಿಯೋಜಿಸಿದ್ದರೆ ಭಾರತಿ ಅವರನ್ನು ರೂಪಾ ಅವರ ಜಾಗಕ್ಕೆ ನಿಯೋಜಿಸಲಾಗಿದೆ. ಅಚ್ಚರಿ ಎಂಬಂತೆ ರೂಪಾ ಪತಿ ಮುನಿಶ್ ಮೌದ್ಗಿಲ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಟಿವ್ ರಿಫಾರ್ಮ್ಸ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಸರ್ವೆ, ಭೂದಾಖಲೆಗಳ ಇಲಾಖೆ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್‌ರನ್ನು ಡಿಪಿಎಆರ್ ಇಲಾಖೆಯ ಪ್ರಭಾವವಿಲ್ಲದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗ ಮಾಡಲಾಗಿದೆ. ಮುನೀಶ್ ಮೌದ್ಗಿಲ್ ಇದ್ದ ಸರ್ವೆ, ಭೂ ದಾಖಲೆಗಳ ಇಲಾಖೆ ಆಯುಕ್ತರ ಜಾಗಕ್ಕೆ ಸಿ. ಎನ್. ಶ್ರೀಧರ್‌ ವರ್ಗಾವಣೆಗೊಂಡಿದ್ದಾರೆ. ಈ ಕಿತ್ತಾಟಕ್ಕೆ ಮುನೀಶ್ ಮೌದ್ಗಿಲ್ ಸಂಬಂಧಪಟ್ಟಿದ್ದಾರೆ ಎಂದು ಆ ಮೂಲಕ ಸರ್ಕಾರವೇ ಹೇಳಿದಂತಿದೆ. ಇದರಲ್ಲಿ ಮುನೀಶ್ ಮೌದ್ಗಿಲ್ ಅವರದ್ದು ಯಾವ ಥರ ಸಂಬಂಧ, ಖಾಸಗಿನಾ, ವೃತ್ತಿಯದ್ದಾ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕಳೆದ ಎರಡು ದಿನಗಳಿಂದ ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟ ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಒತ್ತಡ, ಮುಜುಗರಕ್ಕೆ ಒಳಗಾದ ಸರ್ಕಾರ ಇಬ್ಬರಿಗೂ ಕರೆಸಿ ಸ್ಪಷ್ಟನೆ ಪಡೆದು, ಬಹಿರಂಗ ಹೇಳಿಕೆ ನೀಡದಂತೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ, ಅಖಿಲ ಭಾರತ ಸೇವೆಗಳ ನಿಯಮಗಳಿಗೆ ಬದ್ಧರಾಗಿರುವಂತೆ ಖಡಕ್ ಎಚ್ಚರಿಕೆ ಕೊಟ್ಟಿತ್ತು. ಇವತ್ತು ಅದರ ಮುಂದುವರಿದ ಭಾಗವಾಗಿ ವರ್ಗಾವಣೆ ಶಾಕ್ ಕೊಟ್ಟಿದೆ.‌

ವರ್ಗಾವಣೆ ಮಾತ್ರನಾ? ಇನ್ನೂ ಬೇರೆ ಶಿಸ್ತು ಕ್ರಮ ಇದೆಯೋ?: ಸದ್ಯಕ್ಕೆ ಇಬ್ಬರು ಮಹಿಳಾ ಅಧಿಕಾರಿಗಳು ಹಾಗೂ ಮುನೀಶ್ ಮೌದ್ಗಿಲ್ ವರ್ಗ ಮಾಡಿ, ತನ್ನ ವ್ಯಾಪ್ತಿಯಲ್ಲಿ ಸರ್ಕಾರ ಶಿಸ್ತುಕ್ರಮ ಕೈಗೊಂಡಿದೆ. ಆದ್ರೆ ಇಷ್ಟು ಮಾತ್ರದ ಕ್ರಮದಿಂದ ಸಮಸ್ಯೆ ಬಗೆಹರಿಯುತ್ತಾ? ಸರ್ಕಾರಕ್ಕೆ ಹೋದ ಮಾನ ವಾಪಸ್ ಬರುತ್ತಾ? ಆ ಅಧಿಕಾರಿಗಳು ಬುದ್ಧಿ ಕಲೀತಾರಾ? ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬೇರೆ ಕಠಿಣ ಶಿಕ್ಷೆ ಇಲ್ವಾ ಅನ್ನೋ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ.

- Advertisement -

Related news

error: Content is protected !!