Thursday, May 2, 2024
spot_imgspot_img
spot_imgspot_img

ಓಪನ್ ಆಗಿಯೇ ಭಾರತಕ್ಕೆ ಯುದ್ಧದ ಧಮ್ಕಿ ಕೊಟ್ಟ ಚೀನಾ; ನೀವು ಗೆಲ್ಲೋದಿಲ್ಲ ಎಂದು ಉದ್ಧಟತನ

- Advertisement -G L Acharya panikkar
- Advertisement -
driving

ನವದೆಹಲಿ: ಚೀನಾ ಮತ್ತು ಭಾರತದ ನಡುವೆ ನಡೆದ 13 ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಬಹುತೇಕ ವಿಫಲವಾಗಿದೆ. ಮಾತುಕತೆಯ ವೇಳೆ ಯಾವುದೇ ಗಡಿಪ್ರದೇಶದಲ್ಲಿ ಸೇನೆಯನ್ನು ಹಿಂಪಡೆದುಕೊಳ್ಳಲು ಚೀನಾ ಒಪ್ಪಿಲ್ಲ ಎನ್ನಲಾಗಿದೆ. ಇದರ ಮಧ್ಯೆಯೇ ಚೀನಾ ತನ್ನ ಸರ್ಕಾರಿ ಮಾಧ್ಯಮದಲ್ಲಿ ಭಾರತದ ವಿರುದ್ಧ ಉದ್ಧಟತನದ ಮಾತುಗಳನ್ನಾಡಿದೆ.

ಭಾರತ ಗಡಿ ಪ್ರದೇಶದಲ್ಲಿ ಚೀನಾದ ಬಾರ್ಡರ್​​ನ್ನು ಆಕ್ರಮಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಭಾರತ ಮತ್ತು ಚೀನಾ ಎರಡು ಗ್ರೇಟ್ ಪವರ್​ ದೇಶಗಳಾಗಿದ್ದು ಹಲವು ವರ್ಷಗಳಿಂದ ಗಡಿ ಸಮಸ್ಯೆಯನ್ನು ಎದುರಿಸುತ್ತಿವೆ. ಇಂಥ ಸಮಯದಲ್ಲಿ ಗಡಿಯಲ್ಲಿ ಶಾಂತಿ ಕಾಪಾಡುವುದು ಮುಖ್ಯ.. ಇದನ್ನ ಮೀರಿದಲ್ಲಿ ಭಾರತ ಈ ವಿಚಾರದಲ್ಲಿ ಸ್ಪಷ್ಟವಾಗಿರಲಿ. ಭಾರತ ಎಂದಿಗೂ ಗಡಿಯನ್ನು ತಾನು ಅಂದುಕೊಂಡಂತೆ ಪಡೆಯಲು ಸಾಧ್ಯವಿಲ್ಲ. ಭಾರತ ಯುದ್ಧ ಪ್ರಾರಂಭಿಸಿದಲ್ಲಿ ಖಂಡಿತ ಸೋಲುತ್ತದೆ. ಇದರ ಮಧ್ಯೆ ಯಾವ ರಾಜಕೀಯ ಒತ್ತಡಕ್ಕೂ ಚೀನಾ ಮಣಿಯುವುದಿಲ್ಲ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದೆ.

ಮುಂದುವರೆದು ಭಾರತದ ಜೊತೆಗೆ ಗಡಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಎರಡು ವಿಚಾರಗಳು ಪ್ರಮುಖವಾಗುತ್ತವೆ. ಮೊದಲನೆಯದಾಗಿ ಭಾರತ ಎಷ್ಟೇ ಕೆಣಕಿದರೂ ಚೀನಾ ಗಡಿ ಚೀನಾದ್ದೇ ಆಗಿರುತ್ತದೆ. ಅದನ್ನ ಎಂದಿಗೂ ವಶಪಡಿಸಿಕೊಳ್ಳಲು ಬಿಡೋದಿಲ್ಲ.. ಎರಡನೆಯದಾಗಿ ತಾಳ್ಮೆಯಿಂದಿದ್ದು ಯುದ್ಧೋಪಾದಿಯಲ್ಲಿ ಮಿಲಿಟರಿ ಘರ್ಷಣೆಗೆ ಸಿದ್ಧರಾಗುವುದು. ಆದರೆ ಚೀನಾ-ಭಾರತ ಗಡಿಯಲ್ಲಿ ಶಾಂತಿ ಕಾಪಾಡಲು ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ. ಬಾರ್ಡರ್ ವಿಚಾರದಲ್ಲಿ ಭಾರತ ಇನ್ನೂ ನಿದ್ದೆಗಣ್ಣಿನಲ್ಲಿದೆ. ಅದು ಎಚ್ಚರಗೊಳ್ಳುವವರೆಗೂ ಕಾಯುತ್ತೇವೆ ಎಂದಿದೆ.

- Advertisement -

Related news

error: Content is protected !!