Saturday, July 5, 2025
spot_imgspot_img
spot_imgspot_img

ಕಟೀಲು ಮೇಳದ ಚೌಕಿ ಸಹಾಯಕ ಯಕ್ಷಗಾನ ನಡೆಯುತ್ತಿದ್ದ ಸ್ಥಳದಲ್ಲೇ ಹೃದಯಾಘಾತದಿಂದ ನಿಧನ

- Advertisement -
- Advertisement -

ಬಂಟ್ವಾಳ: ಕಟೀಲು ಮೇಳದ ಚೌಕಿ ಸಹಾಯಕನೋರ್ವ ಯಕ್ಷಗಾನ ನಡೆಯುತ್ತಿದ್ದ ಸ್ಥಳವಾದ ಬಿ.ಸಿ. ರೋಡಿನ ಪಲ್ಲಮಜಲು ಎಂಬಲ್ಲಿ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.

ಕಟೀಲು ಮೇಳದ ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ ಅಚ್ಯುತ ನಾಯಕ್ ( 45) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪ್ರಸ್ತುತ ಕಟೀಲು ಮೇಳವು ಕಾಲಮಿತಿ ಯಕ್ಷಗಾನವಾಗಿದ್ದು, ರಾತ್ರಿ ಗಂಟೆಗೆ 1.ರ ಸುಮಾರಿಗೆ ಯಕ್ಷಗಾನ ಮುಗಿದು ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥತೆಗೊಂಡಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಗ ವೈದ್ಯರು ಮೃತಪಟ್ಟಿರುವುದಾಗಿ ಒಂದು ಮೂಲಗಳು ತಿಳಿಸಿದರೆ, ಚೌಕಿಯಲ್ಲೇ ಮೃತಪಟ್ಟಿದ್ದಾರೆ ಎಂದು ಕೆಲ ಕಲಾವಿದರು ಹೇಳತ್ತಿದ್ದಾರೆ. ಒಟ್ಟಿನಲ್ಲಿ ಕಟೀಲು ತಾಯಿಯ ಸೇವೆ ಮಾಡುತ್ತಿದ್ದ ಪರಿಚಾರಕ ಮೃತಪಟ್ಟಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕಟೀಲು ಮೇಳದ ಚೌಕಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಈ. ಹಿಂದೆ ಸರಪಾಡಿ ಸೇರಿದಂತೆ ಹಲವೆಡೆ ಸಣ್ಣ ಹೋಟೆಲ್ ನಡೆಸುತ್ತಿದ್ದರು , ಜೊತೆಗೆ ಅಡುಗೆ ಕೆಲಸಕ್ಕೂ ಹೋಗುತ್ತಿದ್ದರು.

ಶ್ರದ್ಧಾಂಜಲಿ ಸಲ್ಲಿಸದಷ್ಟು ಕಠೋರ ಮನಸ್ಸಿನವರಾದರೇ ಸಹವರ್ತಿಗಳು..!? ಮೇಳದ ಆಡಳಿತ ಮಂಡಳಿ..!?

ಘಟನೆ ನಡೆದು 24 ಗಂಟೆಯಾಗುತ್ತಾ ಬಂದರೂ ಸಹ ಕಲಾವಿದರಾಗಲಿ, ಮೇಳದ ಆಡಳಿತ ಮಂಡಳಿಯಾಗಲಿ ಯಾವುದೇ ಶ್ರದ್ಧಾಂಜಲಿಯನ್ನು‌ ಸಹಿತ ಸಲ್ಲಿಸದೇ ಇರುವುದು ಕಲಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ವಿಟಿವಿ ನ್ಯೂಸ್ ಗೆ ಮಾಹಿತಿ ನೀಡಿದ ಯಕ್ಷಾಭಿಮಾನಿಯೊಬ್ಬರು ಶ್ರದ್ಧಾಂಜಲಿ ಸಲ್ಲಿಸದಷ್ಟು ಕಠೋರ ಮನಸ್ಸಿನವರಾದರೇ ಸಹವರ್ತಿಗಳು..!? ಮೇಳದ ಆಡಳಿತ ಮಂಡಳಿ ಎಂದು ಪ್ರಶ್ನೆ ಮಾಡಿದ್ದಾರೆ.

- Advertisement -

Related news

error: Content is protected !!