Tuesday, June 16, 2026
spot_imgspot_img
spot_imgspot_img

ಕಡಬ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕಾಲು ಜಾರಿ ಬಿದ್ದ ವ್ಯಕ್ತಿ; ಕಾಲು ಮುರಿತ

- Advertisement -
- Advertisement -

ಕಡಬ: ರೈಲಿನಿಂದ ಕಾಲುಜಾರಿ ಬಿದ್ದು ವ್ಯಕ್ತಿಯೋರ್ವರ ಕಾಲುಮುರಿತಕ್ಕೊಳಗಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಸಂಭವಿಸಿದೆ.

ಮಧ್ಯಾಹ್ನ ಮಂಗಳೂರಿಗೆ ತೆರಳುವ ರೈಲು ಹೊರಡುವ ವೇಳೆ ವ್ಯಕ್ತಿ ಹತ್ತಲು ಯತ್ನಿಸಿ ಕಾಲು ಜಾರಿ ಬಿದ್ದು ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಾಳು ರೈಲ್ವೇ ಹಳಿ ಮೇಲೆ ಬಿದ್ದಿದ್ದರೂ ಯಾರೂ ಉಪಚರಿಸಲು ಮುಂದಾಗಲಿಲ್ಲ ಎನ್ನಲಾಗಿದೆ.

ಬಳಿಕ ನೆಟ್ಟಣದ ಪ್ರಸಾದ್ ಹಾಗೂ ಪ್ರಕಾಶ್ ಎಂಬವರು ಗಾಯಾಳು ವ್ಯಕ್ತಿಯನ್ನು ಎತ್ತಿ ಮೇಲೆ ತಂದು ಜೀಪಿನಲ್ಲಿ ಕಡಬ ಆಸ್ಪತ್ರೆಗೆ ಸಾಗಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಗಾಯಾಳು ವ್ಯ ಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ.

- Advertisement -

Related news

error: Content is protected !!