Monday, April 29, 2024
spot_imgspot_img
spot_imgspot_img

ಕಡಬ: SBI ನ ATM ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಕಳಿಸಿ ಬ್ಯಾಂಕ್ ಡೀಟೇಲ್ಸ್ ಪಡೆದು ಮಹಿಳೆಗೆ ವಂಚನೆ; ಪ್ರಕರಣ ದಾಖಲು..!

- Advertisement -G L Acharya panikkar
- Advertisement -

ಕಡಬ: ATM ಕಾರ್ಡ್ ಬ್ಲಾಕ್ ಆಗಿರುವ ಮೆಸೇಜ್ ಕಳಿಸಿ ಬ್ಯಾಂಕ್ ಡೀಟೇಲ್ಸ್ ಪಡೆದು ಮಹಿಳೆಯೋರ್ವರಿಗೆ ವಂಚಿಸಿದ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ನಡೆದಿದೆ.

ಬಿಳಿಯೂರುಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಜಿಲಾ.ಎ ಎಂಬವರ ಮಗ ಪ್ರಣವ್ ನ ಮೊಬೈಲ್ ಗೆ ಜೂ.11 ರಂದು QP-ATMSBI ನಿಂದ ಎಟಿಎಂ ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿದ್ದು, ಬಳಿಕ ಜೂ.23 ರಂದು ಮೊಬೈಲ್ ನಂಬರ್ ಒಂದರಿಂದ ಕೆವೈಸಿ ಅಪ್ಡೇಟ್ ಮಾಡಲು ಕಸ್ಟಮರ್ ಕೇರ್ ನಂಬರ್ ಕಳಿಸಿ ಕರೆ ಮಾಡುವಂತೆ ಮೆಸೇಜ್ ಬಂದಿದೆ. ಪ್ರಣವ್ ಆ ನಂಬರ್ ಗೆ ಕರೆ ಮಾಡಿದಾಗ ನಿನ್ನ ಖಾತೆಯ ಪಿನ್ ಜನರೇಟ್ ಮಾಡಲು ನಿನ್ನ ಮನೆಯಲ್ಲಿರುವ ಇನ್ನೊಬ್ಬರ SBI ಖಾತೆ ನಂಬ್ರ ಹಾಗೂ ಮೊಬೈಲ್ ನಂಬ್ರ ನೀಡಲು ತಿಳಿಸಿದ್ದಾರೆ. ಪ್ರಣವ್ ಬೇರೊಂದು SBI ಖಾತೆ ನಂಬರ್ ಹಾಗೂ ಮೊಬೈಲ್ ನಂಬರ್ ನೀಡಿದ್ದಾನೆ.

ಜೂ.23 ರಂದು ಮತ್ತೊಮ್ಮೆ ಅಪರಿಚಿತ ನಂಬರ್ ನಿಂದ ಕರೆ ಬಂದಿದ್ದು ಮೊಬೈಲ್ ನಂಬರ್ ಗೆ ಬಂದಿರುವ OTP ತಿಳಿಸಲು ಹೇಳಿದ್ದು ಈತ ತಿಳಿಸಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಪ್ರಣವ್ ನು ಹತ್ತಿರವಿರುವ ಎಟಿಎಂ ಗೆ ಹೋಗಿ ಎಟಿಎಂ ನಲ್ಲಿ ಕಾರ್ಡ್ ಹಾಕಿ Internet Banking Option ನಲ್ಲಿ ಅವನು ಹೇಳಿದ ರೀತಿ ಮಾಡಿದ್ದಾನೆ.

ಅದೇ ದಿನ ಸಂಜೆ ಬ್ಯಾಂಕಿನಿಂದ ಕರೆ ಮಾಡಿ ಸಜಿಲಾ ರವರು ಮೊಬೈಲ್ ನಂಬ್ರ ಬದಲಾಯಿಸಿದ ಬಗ್ಗೆ ವಿಚಾರಿಸಿದಾಗ ಮೋಸ ಹೋಗಿರುವ ಬಗ್ಗೆ ತಿಳಿದು ಕೂಡಲೇ ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಿದಾಗ ಜೂ.23 ರಂದು ರೂ.8,00,000/- ಹಣ ಖಾತೆಗೆ ಬಂದಿದ್ದು, ಬಳಿಕ ರೂ.7,080/-, 25,000/-, 25,000/-, 20,000/-, 20,000/-, 30,000/- ,50,000/-, 50,000/-,50,000/-, 2,00,000/-, 2,00,000/-, 20,000/-, 50,000/- ರಂತೆ ಹೀಗೆ ಒಟ್ಟು ರೂ.7,47,080/- ಹಣ ತೆಗೆದಿರುವುದು ಕಂಡುಬಂದಿದೆ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ರಲ್ಲಿ ವಿಚಾರಿಸಿದಾಗ ನಿಮ್ಮ ಖಾತೆಯಿಂದ ರೂ.8,00,000/- ಲೋನ್ ತೆಗೆದಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಸಜಿಲಾರವರು ನೀಡಿದ ದೂರಿನ ಮೇರೆಗೆ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 16/20223, ಕಲಂ : 66(C), 66(D), ಐಟಿ ಆಕ್ಟ್ & ಐಪಿಸಿ 420 ಅನ್ವಯ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!