Wednesday, April 17, 2024
spot_imgspot_img
spot_imgspot_img

ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತೆ ಗೊತ್ತಾ?

- Advertisement -G L Acharya panikkar
- Advertisement -

ನಿದ್ರೆ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಹಾಗೂ ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್,ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ.

ಇಂಥವರಿಗೆ ಅಧ್ಯಯನವೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು ಹಾಗೂ 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ನಂತಹ ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆಎಂದು ಅಧ್ಯಯನವೊಂದು ತಿಳಿಸಿದೆ.

50, 60 ಮತ್ತು 70ನೇ ವಯಸ್ಸಿನಲ್ಲಿ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ನಿದ್ರಿಸದೆ ಇರುವುದು ಮಲ್ಟಿಮಾರ್ಬಿಡಿಟಿಯ ಸಮಸ್ಯೆಯನ್ನು ಶೇ.30 ರಿಂದ 40 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

- Advertisement -

Related news

error: Content is protected !!