Monday, May 13, 2024
spot_imgspot_img
spot_imgspot_img

ಕಬಕ: ಫ್ರೆಂಡ್ಸ್‌ ಕ್ಲಬ್‌(ರಿ) ಮಿತ್ತೂರು, ಇದರ ವತಿಯಿಂದ ಅದ್ಧೂರಿಯಾಗಿ ನಡೆದ 17ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

- Advertisement -G L Acharya panikkar
- Advertisement -

ಕಬಕ: ಫ್ರೆಂಡ್ಸ್‌ ಕ್ಲಬ್‌(ರಿ) ಮಿತ್ತೂರು, ಇದರ ವತಿಯಿಂದ 17ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ದಿನಾಂಕ:18-08-2022ನೇ ಗುರುವಾರದಂದು ಮಿತ್ತೂರು ಶಾಲೆಯಲ್ಲಿ ನಡೆಯಿತು.

ಬೆಳಿಗ್ಗೆ ಗಂಟೆ 11.00ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮ ಸಪಲ್ಯ ಕೃಷಿಕರು ಬೊಳ್ಳರಮಜಲು, ಮಿತ್ತೂರು ನೇರವೇರಿಸಿದ್ದರು. ಅತಿಥಿಗಳಾಗಿ ಸರೋಜ ಎ. ಮುಖ್ಯೋಪಾಧ್ಯಾಯರು, ಮಿತ್ತೂರು ಶಾಲೆ, ಪಾವುಲ್‌ ಡಿ’ಸೋಜ ಕೃಷಿಕರು, ನಾಗಬಳ್ಳಿ, ಮಿತ್ತೂರು, ಮಹಮ್ಮದ್ ಶಮೀರ್(ಯಂ.ಯಂ.ಎಸ್.) ವ್ಯಾಪಾರಸ್ಥರು, ಮಿತ್ತೂರು, ಮಾರ್ಷಲ್ ಪಾೈಸ್ ಗುತ್ತಿಗೆದಾರರು, ಕರಿಮಜಲು ಭಾಗವಹಿಸಿದ್ದರು.

ಮಿತ್ತೂರು ಅಂಗನವಾಡಿ ಪುಟಾಣಿಗಳಿಗೆ ಮುದ್ದು ಕೃಷ್ಣ ಸ್ಫರ್ಧೆ ಏರ್ಪಡಿಸಲಾಗಿತ್ತು. ಮಕ್ಕಳಿಗೆ,ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.

ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರ ಶಾಸಕರಾದ ಸಂಜೀವ ಮಠಂದೂರು ವಹಿಸಿದ್ದರು. ಅತಿಥಿಗಳಾಗಿ ಸುದಾನ ದೇವಾಲಯ, ಪುತ್ತೂರು,ಧರ್ಮಗುರುಗಳು ರೇ। ಫಾ| ವಿಜಯ ಹಾರ್ವಿನ್, ಇಡ್ಕಿದು ಸೇವಾ ಸಹಕಾರಿ ಸಂಘ ಅಧ್ಯಕ್ಷರು ಸುಧಾಕರ ಶೆಟ್ಟಿ ಮಿತ್ತೂರು ಬೀಡಿನಮಜಲು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ ಆಡಳಿತ ಮೊಕ್ತೇಸರರು ಕೆ.ಎಸ್. ಸುರೇಶ್, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ವಿಟ್ಲ ಆರಕ್ಷಕ ಪೋಲೀಸ್ ನಿರೀಕ್ಷಕರು ಠಾಣೆ ನಾಗರಾಜ ಎಚ್‌.ಇ, ಇಡ್ಕಿದು ಸೇವಾ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ, ಶಾಲಾ ಆಡಳಿತ ಮಂಡಳಿ ಮಿತ್ತೂರು ಅಧ್ಯಕ್ಷರು ಆದಂ ಯಂ.ಯಂ.ಯಸ್‌, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಮೇಶ ಪೂಜಾರಿ, ಶೋಭಾ ಕಲ್ಲಸರ್ಪೆ, ಸಂಜೀವ ಪೂಜಾರಿ, ಜಯಂತಿ, ನವೋದಯ ಸ್ವ-ಸಹಾಯ ಗುಂಪುಗಳ ಪ್ರೇರಕಿ ಯಶೋಧ, ವಲೇರಿಯನ್ ಡಿ’ಸೋಜ ಕೃಷಿಕರು ಮಿತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಎಂ. ಸುಧೀರ್‌ ಕುಮಾರ್‌ ಶೆಟ್ಟಿ, ವಸಂತ ಪೂಜಾರಿ ಮಿತ್ತೂರು, ಈಶ್ವರ ಗೌಡ ಕುವೆತ್ತಿಲ, ಉಮೇಶ್‌ ಸುವರ್ಣ ಉಪಸ್ಥಿತರಿದ್ದರು.

ಪುಟಾಣಿ ಮಕ್ಕಳು ಕೃಷ್ಣ ವೇಷ ಧರಿಸಿ ಸಂಭ್ರಮಿಸಿದ್ದರು.

- Advertisement -

Related news

error: Content is protected !!