Saturday, June 28, 2025
spot_imgspot_img
spot_imgspot_img

ಕರಾವಳಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ; ಮುಂದಿನ 5 ದಿನಗಳಲ್ಲಿ ಗರಿಷ್ಠ ಬಿಸಿ ಗಾಳಿ ಸಾಧ್ಯತೆ!!

- Advertisement -
- Advertisement -
vtv vitla

ಮಂಗಳೂರು: ಕರಾವಳಿಯಲ್ಲಿ ಬಿಸಿಲಿನ ಮಟ್ಟ ಹೆಚ್ಚಾಗುತ್ತಿದ್ದು, ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಮಂಗಳೂರಿನ ಪಣಂಬೂರಿನಲ್ಲಿ ಮಾ.9ರ ಗುರುವಾರ ಮಧ್ಯಾಹ್ನ ಗರಿಷ್ಠ 38.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಈ ಸಾಲಿನಲ್ಲಿ ದೇಶದಲ್ಲಿ ದಾಖಲಾದ ಗರಿಷ್ಠ ಉಷ್ಣ ವಾತಾವರಣ ಎಂದು ಹವಾಮಾನ ಇಲಾಖೆ ದಾಖಲಿಸಿದೆ.

ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ನಿರ್ದಿಷ್ಟ ಭಾಗಗಳಲ್ಲಿ ಗರಿಷ್ಠ ಬಿಸಿ ಗಾಳಿ ಬೀಸಲಿದೆ ಹಾಗೂ ಅತಿ ಹೆಚ್ಚು ಉಷ್ಣಾಂಶ ಎದುರಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳೂರಿನ ಪಣಂಬೂರಿನಲ್ಲಿ 38.8 ಡಿಗ್ರಿ, ಕಾರವಾರದಲ್ಲಿ 38.6 ಡಿಗ್ರಿ, ಬ್ರಹ್ಮವರದಲ್ಲಿ 38.4 ಡಿಗ್ರಿ, ಹೊನ್ನಾವರದಲ್ಲಿ 38.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕೊಂಕಣ, ಗೋವಾ, ಕರ್ನಾಟಕದ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ಉಷ್ಣಾಂಶದ ಬಿಸಿ ಗಾಳಿಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಾ.9ರಿಂದ 13ರವರೆಗೆ 5 ದಿನಗಳ ಎಚ್ಚರಿಕೆ ನೀಡಿದ್ದು, ಬಿಸಿ ಗಾಳಿಯಿಂದಾಗಿ ಜನರ ಜೀವನಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

- Advertisement -

Related news

error: Content is protected !!