Saturday, May 18, 2024
spot_imgspot_img
spot_imgspot_img

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಮರುದ್ದೀನ್ ಸಾಲ್ಮರ ನೇಮಕ

- Advertisement -G L Acharya panikkar
- Advertisement -

ಮಂಗಳೂರು: ಕರ್ನಾಟಕ ಸರಕಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ರುವ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ, ಸದಸ್ಯರನ್ನಾಗಿ ಪುತ್ತೂರಿನ ಸಾಹಿತಿ ಕವಿ ಮತ್ತು ಹಾಡುಗಾರ ಕಮರುದ್ದೀನ್ ಸಾಲ್ಮರ ರವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ, ಅಧ್ಯಕ್ಷರಾದ ಶ್ರೀ ರಹೀಮ್ ಉಚ್ಚಿಲ್ ರವರು ನೇಮಕಗೊಳಿಸಿ ಆದೇಶಿಸಿದ್ದಾರೆ.

ಶ್ರೀ ಕಮರುದ್ದಿನ್ ಸಾಲ್ಮರ ರವರು ಹಲವಾರು ವರ್ಷಗಳಿಂದ ಸಾಹಿತ್ಯರಂಗದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಾ ಭಾವನಾತ್ಮಕ ಹಾಗೂ ಸೌಹಾರ್ದ ಹಾಡುಗಳು ಮೂಲಕ ಪ್ರಸಿದ್ಧರಾಗಿರುತ್ತಾರೆ.

ಇವರು ರಚಿಸಿ ಹಾಡಿದ “ಎವು ಡೆ ವುಳ್ಳೆ ನೀ” ಎಂಬ ಬ್ಯಾರಿ ಹಾಡುಗಳನ್ನು ಒಳಗೊಂಡ ಕ್ಯಾಸೆಟ್ ಈಗಲೂ ಜನಪ್ರಿಯವಾಗಿದೆ. ಇವರು ಪುತ್ತೂರು ಸಾಲ್ಮರ ನಿವಾಸಿಯಾಗಿದ್ದು, ಪ್ರಸಿದ್ಧ ಸಾಲ್ಮರ ಮನೆತನದ, ದಿವಂಗತ ಅಬ್ದುಲ್ ರಹಿಮಾನ್ ಹಾಗೂ ನಫೀಸಾ ದಂಪತಿಗಳ ಸುಪುತ್ರ ರಾಗಿರುತ್ತಾರೆ.

- Advertisement -

Related news

error: Content is protected !!