Thursday, May 16, 2024
spot_imgspot_img
spot_imgspot_img

ಕಲ್ಲಡ್ಕ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶಾಲಾ ಮುಖ್ಯ ಶಿಕ್ಷಕಿ ಚೇತನ ಪಿ.ವಿ ಇವರಿಗೆ ಅಭಿನಂದನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಕಲ್ಲಡ್ಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೇಬೆಟ್ಟು, ಕಲ್ಲಡ್ಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚೇತನ ಪಿ.ವಿ ಇವರಿಗೆ ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಸ್ತ್ರೀ ಶಕ್ತಿ ಗುಂಪು ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಸ್ಕಾರ ಭರಿತ ಶಿಕ್ಷಣ ದೊರೆತಾಗ ಜೀವನ ಮೌಲ್ಯಗಳು ಹಾಗೂ ಮಕ್ಕಳಲ್ಲಿ ಚೈತನ್ಯ ರೂಪುಗೊಳ್ಳಲು ಶಿಕ್ಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು. ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.


ಒಳ್ಳೆಯ ಶಿಕ್ಷಣದೊಂದಿಗೆ ಸರ್ವರ ಸ್ಪಂದನೆ ಮೂಲಕ ಉತ್ತಮ ವಿದ್ಯಾಕೇಂದ್ರವಾಗಿ ಬೆಳೆದು ಜಿಲ್ಲಾಮಟ್ಟದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಮಾಜಿ ಶಾಸಕ ಶ್ರೀ ರುಕ್ಮಯ್ಯ ಪೂಜಾರಿ ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಶಾರದ ಪ್ರೌಢಶಾಲೆ ಪಾಣೆಮಂಗಳೂರು ಇದರ ಸಂಚಾಲಕ ಜನಾರ್ದನ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಾಳ್ತಿಲಗ್ರಾಮ ಪಂಚಾಯತ್ ಸದಸ್ಯ ಬಿ.ಕೆ ಅನ್ನು ಪೂಜಾರಿ,

ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಿನ್ನಪ್ಪ ಏಳ್ತಿಮಾರ್, ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಲೋಕನಂದ ಏಳ್ತಿಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ಸಾಲಿಯಾನ್, ಆಶಾ ಕಾರ್ಯಕರ್ತೆ ಸುಜಾತ ಎಂ. ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು, ಅಂಗನವಾಡಿ ಕಾರ್ಯಕರ್ತೆಯರನ್ನು, ಅಕ್ಷರ ದಾಸೋಹ ಸಿಬ್ಬಂದಿಗಳನ್ನು, ವಾಹನ ಚಾಲಕರನ್ನು ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯ ಲತೇಶ್ ಕೂರ್ಮನ್, ಶೋಭಾ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ವೆಂಕಟರಾಯ ಪ್ರಭು, ಮೋಹನ್ ಪಿ.ಎಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಕಾರ್ಯದರ್ಶಿ ಪುರಂದರ ದಾಸಕೋಡಿ, ಮಾಧವ ದಾಸಕೋಡಿ ಶಾಲೆಯ ಸಹಶಿಕ್ಷಕಿಯರು, ಶ್ರೀ ಮಣಿಕಂಠ ಯುವಶಕ್ತಿ ಸದಸ್ಯರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಮೇಶ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರು ಪೋಷಕರಾದ ವಿಠ್ಠಲ್ ಬಿ.ಆರ್ ವಂದಿಸಿದರು. ಸುಂದರ ಪಾದೆ ಅಭಿನಂದನ ಪತ್ರ ವಾಚಿಸಿದರು. ಹಿರಿಯ ವಿದ್ಯಾರ್ಥಿನಿ ಶರಣ್ಯ ಪ್ರಾರ್ಥನೆ ಮಾಡಿದರು. ಸಂತೋಷ್ ಕುಮಾರ್ ಬೋಲ್ಪೋಡಿ ಕಾರ್ಯಕ್ರಮ ನಿರೂಪಿಸಿದರು.

driving
- Advertisement -

Related news

error: Content is protected !!