Sunday, May 19, 2024
spot_imgspot_img
spot_imgspot_img

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚ ಶಾಲಾ ಅಭಿಯಾನ

- Advertisement -G L Acharya panikkar
- Advertisement -

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಪರಿಸರ ಸಂಘದ ವತಿಯಿಂದ ಸ್ವಚ್ಚ ಶಾಲಾ ಅಭಿಯಾನಕ್ಕೆ ಬಂಟ್ವಾಳ ನಗರ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಕೃಷ್ಣ ಕುಲಾಲ್ ಕಡಂಬು ಹಾಗೂ ಮಾರುತಿ ವೈ ಚಾಲನೆ ನೀಡಿದರು.

“ಬಳಸು – ಎಸೆ ಸಂಸ್ಕೃತಿ ಸ್ವಾಗತಾರ್ಹವಲ್ಲ. ಆದರೂ ಅನಿವಾರ್ಯ ಸಂದರ್ಭದಲ್ಲಿ ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ನಮ್ಮ ದಿನ ಬಳಕೆ ವಸ್ತುಗಳನ್ನು ವಿಲೇವಾರಿ ಮಾಡಿಕೊಳ್ಳಬೇಕು. ಈ ಸಂಸ್ಕೃತಿ ಶಾಲಾ ಪರಿಸರದಿಂದ ಶಾಲಾ ಬಳಕೆಯ ವಸ್ತುವಿನೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸ ಹೊರಟಿರುವುದು ಪ್ರಶಂಸಾನಾರ್ಹ. ಇಂತಹ ಚಟುವಟಿಕೆಯಿಂದ ಎಳವೆಯಲ್ಲಿಯೇ ಪರಿಸರ ಕಾಳಜಿ ಮೂಡುವುದು” ಎಂದು ಬಂಟ್ವಾಳ ನಗರ ಠಾಣೆಯ ಕಾನ್‌ಸ್ಟೇಬಲ್ ಕೃಷ್ಣ ಕುಲಾಲ್ ಕಡಂಬು ನುಡಿದರು.

ವಿದ್ಯಾರ್ಥಿಗಳು ಬಳಸಿ ಉಪಯೋಗಿಸಲು ಸಾಧ್ಯವಾಗದ ಲೇಖನಿಗಳನ್ನು ಹಾಗೂ ಪ್ಲಾಸ್ಟಿಕ್ ಬಾಟಲಿ ಮುಂತಾದವುಗಳನ್ನು ಮರುಬಳಕೆಗಾಗಿ ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ಅಧ್ಯಾಪಕರಾದ ರಾಜೇಶ್ವರಿ ಎಂ, ಸುಮಂತ್ ಆಳ್ವ ಹಾಗೂ ಸಿದ್ಧರಾಜು ಸಂಯೋಜಿಸಿದರು. ವೇದಿಕೆಯಲ್ಲಿ ಬಂಟ್ವಾಳ ನಗರ ಠಾಣೆಯ ಕಾನ್‌ಸ್ಟೇಬಲ್ ಮಾರುತಿ ವೈ ಮತ್ತು ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

- Advertisement -

Related news

error: Content is protected !!