Wednesday, May 1, 2024
spot_imgspot_img
spot_imgspot_img

ಕಳವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವ ಹೊಸ ವಿಧಾನ ಜಾರಿ; ದ.ಕ. ಪೊಲೀಸ್ ಅಧೀಕ್ಷಕರಿಂದ ಆದೇಶ

- Advertisement -G L Acharya panikkar
- Advertisement -

ದ.ಕ: ಕಳವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವ ಹೊಸ ವಿಧಾನವನ್ನು ದ.ಕ.ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಳವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್‌ಗಳು ಸೈಬರ್ ಅಪರಾಧ ನಾರ್ಕೊಟಿಕ್ಸ್ ಅಪರಾಧ ಸೇರಿದಂತೆ ಇತರ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿರುತ್ತದೆ. ಇಂತಹ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯುನಿಕೇಶನ್ ಇಲಾಖೆಯಿಂದ ಕಳವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿರುತ್ತದೆ ಹಾಗೂ ಪೊಲೀಸ್ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.

ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ ಕಳವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್‌ ಮಾಡಬಹುದಾಗಿದೆ.

  1. ನಿಮ್ಮ ಮೊಬೈಲ್‌ ಫೋನ್ ಕಳವು/ಕಾಣೆಯಾದರೆ/ಸುಲಿಗೆಯಾದರೆ ತಾವು ತಕ್ಷಣವೇ KSP E-Lost ಅಪ್ಲಿಕೇಶನ್ ನಲ್ಲಿ ದೂರನ್ನು ಸಲ್ಲಿಸಿ Digital E Acknowledgement ಪಡೆದುಕೊಳ್ಳಬೇಕು. ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀ ಕೃತಿಯನ್ನು ಪಡೆದುಕೊಳ್ಳುವುದು. ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟು ಕೊಂಡಿರಬೇಕು.
  2. ನೀವು ಕಳೆದುಕೊಂಡಿರುವ ಸಿಮ್‌ಕಾರ್ಡ್‌ ಅನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್‍ ನಿಂದ ಮತ್ತೆ ಪಡೆದುಕೊಂಡು ಒ.ಟಿ.ಪಿ ಪಡೆಯಲು ಸದರಿ ಸಿಮ್ ಕಾರ್ಡನ್ನು ಚಾಲನೆಯಲ್ಲಿ ಇಟ್ಟುಕೊಳ್ಳುವುದು. CEIR PORTALನಲ್ಲಿ ಒ.ಟಿ.ಪಿ ಪಡೆಯಲು ಇದು ಅನುಕೂಲವಾಗುತ್ತದೆ.
  3. http://www.ceir.gov.in ವೆಬ್ ಸೈಟ್‌ಗೆ ಹೋಗಿ ತಮ್ಮ ಕಳವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್‌ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ತಮ್ಮ ಮೊಬೈಲ್‌ಫೋನ್ ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡಾ ಆ ಮೊಬೈಲ್ ಅನ್ನು ದುರ್ಬಳಕೆ ಮಾಡಲು ಸಾದ್ಯವಿರುವುದಿಲ್ಲ .
  4. ಕಳುವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್ ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR PORTAL ನಲ್ಲಿ ಲಾಗಿನ್ ಆಗಿ Unblock ಮಾಡಿ ಉಪಯೋಗಿಸಬಹುದು.
  5. ಹಾಗೆಯೇ ಸಾರ್ವಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ CEIR PORTALಮೂಲಕ ಕಳುವಾದ/ಕಾಣೆಯಾದ ಮೊಬೈಲ್ ಫೋನ್ ಅನ್ನು ಬ್ಲಾಕ್ ಮಾಡಲಾಗುವುದು ಹಾಗೂ ಸದರಿ ಮೊಬೈಲ್ ಫೋನ್ ಪತ್ತೆಯಾದಲ್ಲಿ Unblock ಮಾಡಲಾಗುತ್ತದೆ.
- Advertisement -

Related news

error: Content is protected !!