Wednesday, July 2, 2025
spot_imgspot_img
spot_imgspot_img

ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿರ್ಲಕ್ಷ್ಯದಿಂದ 1.20 ಲಕ್ಷ ಸಾವು

- Advertisement -
- Advertisement -

 ಕಳೆದ ವರ್ಷ ದೇಶದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ನಿರ್ಲಕ್ಷ್ಯದಿಂದ 1.20 ಲಕ್ಷ ಸಾವು ಪ್ರಕರಣಗಳು ವರದಿಯಾಗಿವೆ. ಕೋವಿಡ್-19 ಲಾಕ್ ಡೌನ್ ಹೊರತಾಗಿಯೂ ಪ್ರತಿದಿನ ಸರಾಸರಿ 328 ಜನರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ನೀಡಿರುವ ವಾರ್ಷಿಕ ಕ್ರೈಮ್ ಇಂಡಿಯಾ ವರದಿ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷ ಮಂದಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ನಿರ್ಲಕ್ಷದಿಂದ ಸಾವನ್ನಪ್ಪಿರುವುದಾಗಿ ಬಹಿರಂಗಪಡಿಸಿದೆ. 2020ರಲ್ಲಿ 1.20 ಲಕ್ಷ ಇಂತಹ ಸಾವಿನ ಪ್ರಕರಣಗಳು ದಾಖಲಾಗಿದ್ದರೆ 2019ರಲ್ಲಿ 1.36 ಲಕ್ಷ ಮತ್ತು 2018ರಲ್ಲಿ 1.35 ಲಕ್ಷ ಸಾವಿನ ಪ್ರಕರಣಗಳು ದಾಖಲಾಗಿವೆ.

2018ರಿಂದ 1.35 ಲಕ್ಷ ಹಿಟ್ ಅಂಡ್ ರನ್ ಪ್ರಕರಣಗಳು ದೇಶದಲ್ಲಿ ದಾಖಲಾಗಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್ ಸಿಆರ್ ಬಿ ಮಾಹಿತಿ ನೀಡಿದೆ. ಕಳೆದ ವರ್ಷದಲ್ಲಿಯೇ 41,196 ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 47,028 ಮತ್ತು 2018ರಲ್ಲಿ 47, 504 ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿದ್ದವು.

ಸಾರ್ವಜನಿಕ ದಾರಿಯಲ್ಲಿ ವೇಗವಾಗಿ ಅಥವಾ ನಿರ್ಲಕ್ಷ್ಯದ ಚಾಲನೆಯಿಂದ ಕಳೆದ ವರ್ಷ 1.30 ಲಕ್ಷ ನೋಯಿಸಿದ (ಹರ್ಟ್) ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಕಳೆದ ವರ್ಷ ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ 52 ಸಾವಿನ ಪ್ರಕರಣಗಳು ದಾಖಲಾಗಿವೆ.

ಕೋವಿಡ್-19 ಲಾಕ್ ಡೌನ್ ಕಾರಣ ಕಳೆದ ವರ್ಷ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ವಿರುದ್ಧದ ಅಪರಾಧ, ಕಳ್ಳತನ, ದರೋಡೆ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿ ನೀಡಿದೆ.

- Advertisement -

Related news

error: Content is protected !!