Sunday, June 14, 2026
spot_imgspot_img
spot_imgspot_img

ಕಾಫಿತೋಟದಲ್ಲಿ ಕಾರ್ಮಿಕ ಮಹಿಳೆ ಮೇಲೆ ಮರ ಬಿದ್ದು ಮೃತ್ಯು

- Advertisement -
- Advertisement -

ಕಳಸ: ಹೊರನಾಡಿನ ಕಾಫಿತೋಟವೊಂದರಲ್ಲಿ ಮರ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಪ್ರಿಯಾಂಕ (20) ಮೃತಪಟ್ಟ ಯುವತಿ. ಜಿ.ರಾಮನಾರಾಯಣ ಜೋಷಿ ಮಾಲೀಕತ್ವದ ಹೂವಿನಹಿತ್ತಲು ಎಸ್ಟೇಟ್‍ನಲ್ಲಿ ಘಟನೆ ನಡೆದಿದೆ. ದೊಡ್ಡ ಮರವೊಂದು ಬೀಳುವ ಸದ್ದು ಕೇಳಿ ಕಾರ್ಮಿಕರು ಕಕ್ಕಾಬಿಕ್ಕಿಯಾದರು. ಮೈಮೇಲೆ ಮರ ಬಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟರು.

ಹರಪನಹಳ್ಳಿ ಲಂಬಾಣಿ ತಾಂಡಾದ ನಿವಾಸಿಯಾಗಿದ್ದ ಪ್ರಿಯಾಂಕ ಮೇ ತಿಂಗಳಿಂದ ಚಿಕ್ಕಪ್ಪ, ಚಿಕ್ಕಮ್ಮನ ಜೊತೆ ಹೊರನಾಡಿನಲ್ಲೇ ವಾಸವಿದ್ದು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕಳಸ ತಹಶೀಲ್ದಾರ್‌ ನಂದಕುಮಾರ್, ಠಾಣಾಧಿಕಾರಿ ಹರ್ಷವರ್ಧನ್, ಎಎಸ್‍ಐ ಮೋಹನ್ ಕುಮಾರ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

- Advertisement -

Related news

error: Content is protected !!