Sunday, May 19, 2024
spot_imgspot_img
spot_imgspot_img

ಕಾರ್ಕಳ: ಕನಸು ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುರಕ್ಷಾ ಅನಾಥಾಶ್ರಮಕ್ಕೆ ಆಹಾರ ಸಾಮಗ್ರಿ ವಿತರಣೆ

- Advertisement -G L Acharya panikkar
- Advertisement -
vtv vitla

ಕೈಲಾದ ಸೇವೆ ಮಾಡುವುದರಿಂದ ತೃಪ್ತಿ: ಪವನ್ ಪೆರುಮುಂಡ

ಪರರ ನೋವಿಗೆ ಸ್ಪಂದಿಸುವ ಗುಣವಿರಬೇಕು: ಬಾಲಕೃಷ್ಣ ಭೀಮಗುಳಿ

ಕಾರ್ಕಳ: ಕಷ್ಟ-ಸುಖಗಳು ಪ್ರತಿಯೊಬ್ಬರ ಬದುಕಿನಲ್ಲಿ ಸುಳಿಯದೇ ಇರಲಾರದು. ಪರೋಪಕಾರಿಯಾಗಿ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸ್ಪಂದಿಸುವ ಗುಣ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಕೈಲಾದ ಸೇವೆ ಮಾಡುವುದರಿಂದ ತೃಪ್ತಿ ದೊರಕುವುದು ಎಂದು ಕನಸು ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪವನ್ ಪೆರುಮುಂಡ ಹೇಳಿದರು.

ಕಾರ್ಕಳದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕನಸು ಸೇವಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮೊದಲ ಕಾರ್ಯಕ್ರಮದಂಗವಾಗಿ ಕಾರ್ಕಳದ ಜರಿಗುಡ್ಡೆ ಸುರಕ್ಷಾ ಸೇವಾಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಿಸಿ ಅವರು ಮಾತನಾಡಿದರು.

ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಮಾತನಾಡಿ, ಸೇವೆ ಮಾಡುವುದಕ್ಕೆ ಮುಖ್ಯವಾಗಿ ಬೇಕಾಗುವುದು ಮನಸ್ಸು. ಪ್ರತಿಯೊಬ್ಬರು ಕೈಲಾದ ಸಹಾಯ ಮಾಡಿ ಪರರ ನೋವಿಗೆ ಸ್ಪಂದಿಸುವ ಕಾರ್ಯ ನಡೆಸಬೇಕು..ನಿಸ್ವಾರ್ಥ ಸೇವೆ ಮಾಡುವ ಮನೋಭಾವವಿದ್ದರೆ ಯಾವ ರೀತಿಯಲ್ಲೂ ಸೇವೆ ಮಾಡಬಹುದು ಎನ್ನುವುದಕ್ಕೆ ಅನಾಥಶ್ರಮದ ಮೂಲಕ ನೊಂದ ಜೀವಗಳಿಗೆ ಆಸರೆಯಾಗಿರುವ ಅಯಿಶಾರವರೇ ಸಾಕ್ಷಿ ಎಂದು ಹೇಳಿದರು. ಸುರಕ್ಷಾ ಆಶ್ರಮದ ಅಯಿಶಾ ಸ್ವಾಾಗತಿಸಿದರು.

ಟ್ರಸ್ಟಿಗಳಾದ ಅರ್ಚನಾ ಶೆಟ್ಟಿ, ದಿನೇಶ್ ಆಚಾರ್ಯ, ಅಕ್ಷತ್, ರಮಾನಂದ ಅಜೆಕಾರ್ ಉಪಸ್ಥಿತರಿದ್ದರು. ಶ್ವೇತಾ ಜೈನ್, ಮಂಜೇಶ್, ಅವಿಲ್ ರೆಂಜಾಳ ಉಪಸ್ಥಿತರಿದ್ದು ಸಹಕರಿಸಿದರು. ಸುಮಾರು 11 ಸಾವಿರಷ್ಟು ಮೊತ್ತದ ಆಹಾರ ಸಾಮಗ್ರಿ, ಹಣ್ಣು ಹಾಗೂ ನಗದು ಹಸ್ತಾಂತರಿಸಲಾಯಿತು.

- Advertisement -

Related news

error: Content is protected !!