Monday, July 7, 2025
spot_imgspot_img
spot_imgspot_img

ಕಾರ್ಕಳ: ಯುವತಿ ನಾಪತ್ತೆ; ಕೇರಳದ ಯುವಕನೊಂದಿಗೆ ಪರಾರಿಯಾಗಿರುವ ಶಂಕೆ; ದೂರು ದಾಖಲು..!

- Advertisement -
- Advertisement -

ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಬೊಳ್ಳ ಎಂಬಲ್ಲಿನ ಯುವತಿಯೋರ್ವಳು ಮಂಗಳವಾರ ರಾತ್ರಿ ಏಕಾಎಕಿ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.

ಮರ್ಣೆ ಗ್ರಾಮದ ನಿವಾಸಿ ಕೆ.ಪಿ ಅಬ್ರಾಹಂ ಎಂಬವರ ಮಗಳು ಅನಿಶಾ (18)ಎಂಬವಳು ನಾಪತ್ತೆಯಾಗಿರುವ ಯುವತಿ.

ನಾಪತ್ತೆಯಾಗಿರುವ ಅನಿಶಾ (18)

ಅನಿಶಾ ತಂದೆಗೆ ಕರೆಮಾಡಿ ನಾನು ಕೇರಳ ತಲುಪಿದ್ದು ಇಲ್ಲಿ ಸುರಕ್ಷಿತವಾಗಿದ್ದೇನೆ ನೀವೇನು ಬೇಸರ ಪಡಬೇಡಿ ಎಂದು ಹೇಳಿದ್ದಾಳೆ. ಅನಿಶಾ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲೇ ಇದ್ದಳು.

ಕಳೆದ ಕೆಲ ಸಮಯದಿಂದ ಕೇರಳದ ಯುವಕನನ್ನು ಪ್ರೀತಿಸುತ್ತಿದ್ದಳು ಆತ ಈ ಹಿಂದೆ ಅಜೆಕಾರಿಗೆ ಬಂದು ಹೋಗಿದ್ದ ಎನ್ನಲಾಗಿದೆ. ಅನಿಶಾ ಅಪ್ರಾಪ್ತ ವಯಸ್ಸಿನವಳಾಗಿದ್ದ ಹಿನ್ನೆಲೆಯಲ್ಲಿ ಇವರ ಮದುವೆಗೆ ಅಡ್ಡಿಯಾಗಿತ್ತು. ಈಕೆಗೆ ಜೂನ್ 15 ಕ್ಕೆ 18 ವರ್ಷ ತುಂಬಿದೆ ಎನ್ನಲಾಗಿದೆ. ಈ‌ ಹಿನ್ನೆಲೆಯಲ್ಲಿ ಪ್ರಾಪ್ತ ವಯಸ್ಸಿಗೆ ಬಂದ ಬಳಿಕವೇ ಇವರಿಬ್ಬರು ಕೇರಳದಲ್ಲಿ ಮದುವೆಯಾಗಿರುವ ಸಾಧ್ಯತೆಯಿದೆ. ಅನಿಶಾ ನಾಪತ್ತೆಯಾಗಿರುವ ಕುರಿತು ಆಕೆಯ ತಂದೆ ಅಬ್ರಹಾಂ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!