Thursday, May 2, 2024
spot_imgspot_img
spot_imgspot_img

ಕಾರ್ಕಳ: ಸುಮಾರು 17 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

- Advertisement -G L Acharya panikkar
- Advertisement -

ಕಾರ್ಕಳ: ದುರ್ಗಾ ಗ್ರಾಮದ ಪರಿಸರದಲ್ಲಿ ಸುಮಾರು 17 ಅಡಿ ಉದ್ದದ ಕಾಳಿಂಗವು ನಾಗರಿಕ ನಿದ್ದೆಗೆಡಿಸಿದ್ದು, ಉರಗಪ್ರೇಮಿ ಅನಿಲ್ ಪ್ರಭು ಸೆರೆಹಿಡಿದ ಘಟನೆ ನಡೆದಿದೆ. ಹಲವು ದಿನದ ನಂತರ ಅದೇ ಪರಿಸರದಲ್ಲಿ 10ಗಂಟೆಯ ವೇಳೆಗೆ ಕಾಳಿಂಗ ಕಾಣಸಿಕ್ಕಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಭಯ ಹೆಚ್ಚುಮಾಡಿತ್ತು. ಇದರಿಂದ ಕಾಣಸಿಕ್ಕಿರುವ ಕಾಳಿಂಗವನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖಾಧಿಕಾರಿಗೆ ಗ್ರಾಮಸ್ಥರು ಮನವಿ ನೀಡಿದ್ದರು. ಆದರೆ ಗ್ರಾಮಸ್ಥರ ಕೋರಿಕೆ ಪ್ರತಿಕ್ರಿಯೆ ಸಿಗದೆ ಹೋಗಿದೆ.

ಅರಣ್ಯ ಇಲಾಖೆಯಲ್ಲಿ ಉರಗ ಸೆರೆ ಹಿಡಿಯಲು ಸಮರ್ಪಕ ವ್ಯವಸ್ಥೆ ಇಲ್ಲದೇ ಉರಗ ಪ್ರೇಮಿ ಅನಿಲ್ ಪ್ರಭು ಅವರು ಗ್ರಾಮಸ್ಥರ ಕೋರಿಕೆ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಕಾಳಿಂಗ ಸರ್ಪವನ್ನು ತಡ ರಾತ್ರಿ 11 ಗಂಟೆಯ ಹೊತ್ತಿಗೆ ಸೆರೆ ಹಿಡಿದಿದ್ದಾರೆ. ಕಾರ್ಕಳ ವಲಯದಲ್ಲಿ ಉರಗಗಳು ಸೆರೆ ಹಿಡಿಯಲು ಅನುಭವ ಹೊಂದಿದವರು ಇಲ್ಲದೇ ನುರಿತ ತರಬೇತುದಾರ ಘಟನಾ ಸ್ಥಳಕ್ಕೆ ಕರೆಯಿಸಬೇಕಾದ ದುಸ್ಥಿತಿ ಇಲಾಖೆದ್ದಾಗಿದೆ.

ಅಪಾಯಕಾರಿ ಉರಗಗಳನ್ನು ಸೆರೆ ಹಿಡಿಯುವುದಕ್ಕೆ ಅರಣ್ಯಇಲಾಖೆ ಉರಗ ಪ್ರೇಮಿ ಅನಿಲ್ ಪ್ರಭು ಅವರನ್ನು ಪ್ರಶಂಸಿಸುತ್ತದೆ. ಕಾನೂನು ಚೌಕಟ್ಟಿನಲ್ಲಿ ಅರಣ್ಯ ಇಲಾಖೆಯ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಯಾರು ಹೊಣೆ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಉತ್ತರಿಸಬೇಕಿದೆ.

- Advertisement -

Related news

error: Content is protected !!