Monday, June 30, 2025
spot_imgspot_img
spot_imgspot_img

ಕಾಸರಗೋಡು: ಜಿಲ್ಲೆಯಿಂದ ಗಡಿಪಾರಾಗಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಅರೆಸ್ಟ್

- Advertisement -
- Advertisement -

ಕಾಸರಗೋಡು: ಕುಖ್ಯಾತ ಆರೋಪಿಯೋರ್ವನನ್ನು ಸಿನಿಮೀಯ ಶೈಲಿಯಲ್ಲಿ ಕಾಸರಗೋಡು ಪೊಲೀಸರು ಬಂಧಿಸಿದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪಡನ್ನಕ್ಕಾಡ್‌‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಅಂಬಲತ್ತರದ ಬಿ. ರಂಶೀದ್ ಬಂಧಿತ ಆರೋಪಿ.

ಕಾಫಾ ಕಾಯ್ದೆಯನ್ನು ಹೂಡಿ ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು, ಆದರೆ ಈತ ಗುರುವಾರ ಮಧ್ಯಾಹ್ನ ಕಾಸರಗೋಡಿಗೆ ಆಗಮಿಸುತ್ತಿರುವುದಾಗಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಡನ್ನಕ್ಕಾಡ್ ಮೇಲ್ಸೇತುವೆಯಲ್ಲಿ ವಾಹನ ತಡೆದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ಬಳಿಯಿಂದ 1.88 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಕಳವು, ಹೊಡೆದಾಟ, ಮಾದಕವಸ್ತು ಸಾಗಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿರುವ ಈತನನ್ನು ಬಂಧಿಸಿದ್ದ ಪೊಲೀಸರು ಕಾಫಾ ಕಾಯ್ದೆ ಹೂಡಿ ಗಡಿಪಾರು ಮಾಡಲಾಗಿತ್ತು. ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ಈತನಿಂದ ನಿರ್ಬಂಧ ಹೇರಲಾಗಿತ್ತು. ಈ ಆದೇಶ ಉಲ್ಲಂಘಿಸಿ ಈತ ಜಿಲ್ಲೆಗೆ ಪ್ರವೇಶಿಸಿದ್ದು, ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ರಂಶೀದ್‌ಗೆ ನೇರವಾದ ಝುಬೈರ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!