Friday, May 17, 2024
spot_imgspot_img
spot_imgspot_img

ಕಾಸರಗೋಡು: ದಂಪತಿಗಳಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ-ಪತ್ನಿ ಸಾವು,ಪತಿ ಗಂಭೀರ ಸ್ಧಿತಿ  

- Advertisement -G L Acharya panikkar
- Advertisement -

ಕಾಸರಗೋಡು: ದಂಪತಿಗಳು ಇಬ್ಬರು ಸಂಚರಿಸುತ್ತಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ವಾಹನದಲ್ಲಿದ್ದ ವ್ಯಕ್ತಿ ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಬಳಿ ನಡೆದಿದ್ದು , ಪತ್ನಿ ಸಾವನ್ನಪ್ಪಿ, ಪತಿ ಗಾಯಗೊಂಡದ್ದಾರೆ. ಮಂಗಳೂರು ಕೊಟ್ಟಾರ ಚೌಕಿಯ ನಳಿನಾಕ್ಷಿ (65) ಮೃತಪಟ್ಟ ಆಕೆ ಎಂದು ಗುರುತಿಸಲಾಗಿದೆ .

ಕಾಸರಗೋಡಿನ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೈಕ್ ನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಗೆ ಅತೀ ವೇಗದಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದ್ದು , ಡಿಕ್ಕಿಯ ರಭಸಕ್ಕೆ ಇಬ್ಬರು , ರಸ್ತೆಗೆಸೆಲ್ಪಟ್ಟಿದ್ದು ಗಂಭೀರ ಗಾಯಗೊಂಡಿದ್ದ ನಳಿನಾಕ್ಷಿ ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು, ಹಾಗೂ ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಕ್ಕಿ ಹೊಡೆದ ವಾಹನ ಪಿಕಪ್ ವ್ಯಾನ್ ಆಗಿರಬಹುದು ಸಂಶಯ ವ್ಯಕ್ತಪಡಿಸಿದ ಪೊಲೀಸರು ರಸ್ತೆ ಬದಿಯ ಮನೆ , ಕಟ್ಟಡದಲ್ಲಿರುವ ಸಿ ಸಿ ಟಿ ವಿ ದ್ರಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ವಾಹನದ ಪತ್ತೆಗೆ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Related news

error: Content is protected !!