Tuesday, September 22, 2026
spot_imgspot_img
spot_imgspot_img

ಕಾಸರಗೋಡು: ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು; ನಾಲ್ವರು ಪವಾಡ ಸದೃಶ್ಯ ಪಾರು

- Advertisement -
- Advertisement -

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಬಾವಿಗೆ ಬಿದ್ದ ಘಟನೆ ಬೇಕಲ ಸಮೀಪದ ಪೂಚಕ್ಕಾಡ್ ಎಂಬಲ್ಲಿ ಇಂದು ಸಂಜೆ ನಡೆದಿದ್ದು, ಕಾರಲ್ಲಿದ್ದ ನಾಲ್ವರು ಪವಾಡ ಸದೃಶ ವಾಗಿ ಪಾರಾಗಿದ್ದಾರೆ.

ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾವಿಯಲ್ಲಿ ಸಿಲುಕಿದ್ದ ನಾಲ್ವರನ್ನು ಪರಿಸರವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ರಕ್ಷಿಸಿದರು.

vtv vitla
vtv vitla

ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆವರಣ ಇಲ್ಲದ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಪರಿಸರವಾಸಿಗಳು ಕೂಡಲೇ ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ಪರಿಸರದ ಯುವಕರು ಕಾರಿನಿಂದ ಹೊರತೆಗೆದು ಮೇಲಕ್ಕೆತ್ತಿದರು.

ಓರ್ವನನ್ನು ಅಗ್ನಿಶಾಮಕ ದಳದ ಸಿಬಂದಿಗಳು ರಕ್ಷಿಸಿದರು. ಬಾವಿಗೆ ಬಿದ್ದ ಕಾರು ಅರ್ಧ ಮುಳುಗಿದ ಸ್ಥಿತಿಯಲ್ಲಿತ್ತು. ಕಾರಿನ ಗಾಜು ಹಾಗೂ ಬಾಗಿಲು ಒಡೆದು ನಾಲ್ವರನ್ನು ಹೊರೆತೆಗೆದು ಮೇಲಕ್ಕೆ ತಂದು ರಕ್ಷಿಸಲಾಯಿತು. ಕಾರಲ್ಲಿದ್ದವರು ಉದುಮ ನಿವಾಸಿಗಳಾಗಿದ್ದಾರೆ.

vtv vitla
vtv vitla
- Advertisement -

Related news

error: Content is protected !!