Saturday, June 28, 2025
spot_imgspot_img
spot_imgspot_img

ಕಾಸರಗೋಡು: ಲ್ಯಾಬ್‌ ಟೆಕ್ನಿಷಿಯನ್‌ ವಿದ್ಯಾರ್ಥಿನಿ ಮನೆಯ ಸ್ನಾನಗೃಹದಲ್ಲಿ ಶವವಾಗಿ ಪತ್ತೆ..!!

- Advertisement -
- Advertisement -
vtv vitla

ಕಾಸರಗೋಡು: ಮನೆಯ ಸ್ನಾನಗೃಹದಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ವಿದ್ಯಾರ್ಥಿಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೇರಳದ ಕಾಞಂಗಾಡ್‌ನಲ್ಲಿ ನಡೆದಿದೆ.

ಮೃತಳನ್ನು ರಾವಣೇಶ್ವರಂನ ಪೊಡಿಪಲ್ಲಂ ನಿವಾಸಿ ಕುಂಜಿಕಣ್ಣನ್ ಮತ್ತು ಲೀಲಾ ದಂಪತಿಯ ಪುತ್ರಿ ಜಿಸಿನಾ (23) ಎಂದು ಗುರುತಿಸಲಾಗಿದೆ.

ಸೋಮವಾರ ಮಧ್ಯಾಹ್ನ ಅವರು ಸ್ನಾನಗೃಹದಲ್ಲಿ ಶವರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ನಾನಗೃಹಕ್ಕೆ ತೆರಳಿದ್ದ ಯುವತಿ ಬಹಳ ಸಮಯದ ನಂತರವೂ ಸ್ನಾನಗೃಹದಿಂದ ಹೊರಬಂದಿರಲಿಲ್ಲ. ಇದರಿಂದ ಮನೆಯವರು ಅನುಮಾನಗೊಂಡು ಬಾಗಿಲು ಬಡಿದರು ತೆರೆಯಾದ ಕಾರಣ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ, ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಕಾಞಂಗಾಡ್ ನ ಮನ್ಸೂರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪದವಿ ಮುಗಿದ ನಂತರ ಯುವತಿ ಕಾಞಂಗಾಡ್ ಖಾಸಗಿ ಸಂಸ್ಥೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಗೆ ಸೇರಿಕೊಂಡರು. ಹೊಸದುರ್ಗ ಪೊಲೀಸರು ತನಿಖೆ ನಡೆಸಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮರತದೇಹವನ್ನು ಒಪ್ಪಿಸಿದ್ದಾರೆ.

- Advertisement -

Related news

error: Content is protected !!