Sunday, November 15, 2026
spot_imgspot_img
spot_imgspot_img

ಕಾಸರಗೋಡು: ಸಹೋದರನನ್ನು ಕೊಲೆಗೈದ ಪ್ರಕರಣ; ತಮ್ಮ ರಾಜೇಶ್ ನ ಬಂಧನ

- Advertisement -
- Advertisement -

ಕಾಸರಗೋಡು: ಸಹೋದರನನ್ನು ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯ ಥೋಮಸ್ ಡಿ ಸೋಜ (47) ರವರ ಕೊಲೆಗೆ ಸಂಬಂಧಪಟ್ಟಂತೆ ಸಹೋದರ ರಾಜೇಶ್ ಡಿ ಸೋಜ (35) ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಕ್ಷುಲ್ಲಕ ಕಾರಣಕ್ಕೆ ಥೋಮಸ್ ಮತ್ತು ರಾಜೇಶ್ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.

ಇಬ್ಬರು ಜಗಳವಾಡುತ್ತಿದ್ದ ಸಂದರ್ಭದಲ್ಲಿ ಮನೆಗೆ ಬಂದಿದ್ದ ನೆರೆಮನೆಯ ವಿಲ್ಫ್ರೆಡ್ ಡಿ ಸೋಜ ರವರು ಪ್ರಶ್ನಿನಿಸಿದಾಗ ವಿಲ್ಫ್ರೆಡ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ರಾಜೇಶ್ ಮತ್ತು ಥೋಮಸ್ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಕತ್ತಿಯಿಂದ ಥೋಮಸ್ ಮೇಲೆ ಹಲ್ಲೆ ನಡೆಸಿದ್ದು, ತಡೆಯಲೆತ್ನಿಸಿದ ಇನ್ನೋರ್ವ ಸಹೋದರ ವಿನ್ಸೆಂಟ್ ಗೂ ಗಾಯಗಳಾಗಿವೆ. ಥೋಮಸ್ ಕತ್ತಿನೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ತಲಪಿದ್ದ ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರು.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಕೃತ್ಯ ನೆಡೆಸಿದ ರಾಜೇಶ್ ನನ್ನು ರಾತ್ರಿಯೇ ಪೊಲೀಸರು ವಶಕ್ಕೆ ಪಡೆದರು. ಥೋಮಸ್ ಮತ್ತು ರಾಜೇಶ್ ನಡುವೆ ಕೆಲ ಸಮಯಗಳಿಂದ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

- Advertisement -

Related news

error: Content is protected !!