Sunday, May 19, 2024
spot_imgspot_img
spot_imgspot_img

ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲ ಪತ್ತೆ; ನೈಜೀರಿಯಾ ಮೂಲದ ವ್ಯಕ್ತಿಯ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು: ಬೇಗೂರು ಪೊಲೀಸರು ಕಿಡ್ನಿಯ ಮಾರಾಟ ದಂಧೆಯಲ್ಲಿ ತೊಡಗಿದ್ದಂತಹ ಬೃಹತ್ ಜಾಲವೊಂದನ್ನು ಪತ್ತೆ ಮಾಡಿ, ಪ್ರಕರಣದ ಪ್ರಮುಖ ಆರೋಪಿ ಒಬ್ಬನನ್ನು ಬಂಧಿಸಿದ್ದಾರೆ.

ಡ್ನೂಡಿನ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿಯಾಗಿದ್ದು, ಈತ ನೈಜೀರಿಯಾ ಮೂಲದವನು.ಡ್ರಗ್ಸ್ ಮಾರಾಟ ಹಾಗೂ ಕಿಡ್ನಿ ಮಾರಾಟ, ಖರೀದಿ ದಂಧೆಯಲ್ಲಿ ಗ್ಯಾಂಗ್ ಒಂದನ್ನು ಕಟ್ಟಿಕೊಂಡು ಜನರನ್ನು ಈತ ವಂಚಿಸುತ್ತಿದ್ದನು.

ಈತನನ್ನು ಕಳೆದ ಒಂದು ವರ್ಷದಿಂದ ಗುಜರಾತ್ ರಾಜ್ಯದ ಪೊಲೀಸರು ಹುಡುಕಾಡುತ್ತಿದ್ದರು. ಕಿಡ್ನಿ ಮಾರಾಟ ಹಾಗೂ ಖರೀದಿ ಮಾಡಲಾಗುವುದು ಎಂದು ಜಾಹೀರಾತಿನ ಮೂಲಕ ಈತ ತಿಳಿಸಿ ಗ್ಯಾಂಗ್ ವಂಚನೆ ಮಾಡುತ್ತಿದ್ದು. ಕರ್ನಾಟಕ ಮಾತ್ರವಲ್ಲದೆ ಅಂತರಾಜ್ಯಗಳಲ್ಲೂ ಈ ಗ್ಯಾಂಗ್ ಸಕ್ರಿಯವಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಖತರ್ನಾಕ್ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಕಿಡ್ನಿ ಮಾರಾಟ ಮತ್ತು ಖರೀದಿ ಬಗ್ಗೆ ಜಾಹೀರಾತು ಹಾಕಿ ಎಲ್ಲರಿಗೂ ತಲುಪುವಂತೆ ಮಾಡುತ್ತಿತ್ತು. ಹಣದ ಅಗತ್ಯವಿದ್ದವರು ಈ ಜಾಹೀರಾತು ನೋಡಿ ಕಿಡ್ನಿ ಮಾರಾಟಕ್ಕಾಗಿ ಇವರನ್ನು ಸಂಪರ್ಕಿಸುತ್ತಿದ್ದರು. ಕಿಡ್ನಿ ಬೇಕಾದವರೂ ಕೂಡ ಇವರನ್ನು ಸಂಪರ್ಕಿಸುತ್ತಿದ್ದರು.

ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಮುಂಗಡ ಹಣವನ್ನು ಪಡೆದು ಮೋಸ ಮಾಡುತ್ತಿದ್ದರು. ಇದೀಗ ಬೇಗೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಇವರಿಂದ ಮೂರು ಲ್ಯಾಪ್ ಟಾಪ್, ಹತ್ತು ಮೊಬೈಲ್, ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!