Friday, June 19, 2026
spot_imgspot_img
spot_imgspot_img

ಕುಂದಾಪುರದಲ್ಲಿ ನಡೆದ ಬೆಸ್ಟ್ ಫಿಸಿಕ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ನಿಶಾಂತ್ ಆರ್. ಎಚ್ ರವರಿಗೆ ಬೆಳ್ಳಿ ಪದಕ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಕುಂದಾಪುರ ಡಾ. ಬಿ. ಬಿ ಹೆಗ್ಡೆ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬೆಸ್ಟ್ ಫಿಸಿಕ್ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರಿನ waves Fitness ಪುತ್ತೂರು ಪಡೀಲ್ ನ ನಿಶಾಂತ್ ಆರ್. ಎಚ್ ರವರು ಬೆಳ್ಳಿ ಪದಕ ಪಡೆದಿರುತ್ತಾರೆ.

ಇವರು ದಕ್ಷಿಣ ಕನ್ನಡ 2019 ರ ಚಾಂಪಿಯನ್ ಮತ್ತು ಡಬ್ಲ್ಯೂ ಎಫ್ ಎಫ್ ಏಷ್ಯ ಫೆಸಿಫಿಕ್ 2019 ರ ವಿಜೇತ ಸಚಿನ್ ರೈ ಪುತ್ತೂರು ಇವರಿಂದ ತರಭೇತಿ ಪಡೆದಿರುತ್ತಾರೆ.

ಇವರು ಸಾಲ್ಮರ ಮಹಾಸತಿ ನಗರದ ಮೇನಕಾ ಮತ್ತು ರವೀಂದ್ರ ಸಿ ಎಚ್ ದಂಪತಿಗಳ ಪುತ್ರ. ಬೆಂಗಳೂರಿನಲ್ಲಿ ನಡೆದ ಡಬ್ಲ್ಯೂ ಎಫ್ ಎಫ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ 19 ವರ್ಷದೊಳಗಿನ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕ ಪಡೆದಿರುತ್ತಾರೆ.

- Advertisement -

Related news

error: Content is protected !!