Saturday, September 19, 2026
spot_imgspot_img
spot_imgspot_img

ಕುಂದಾಪುರ: ಹೆದ್ದಾರಿಯಿಂದ ಸಮುದ್ರಕ್ಕೆ ಬಿದ್ದ ಕಾರು; ಓರ್ವ ಸಾವು, ಮತ್ತೋರ್ವ ನಾಪತ್ತೆ

- Advertisement -
- Advertisement -

ಕುಂದಾಪುರ: ಕಾರೊಂದು ಹೆದ್ದಾರಿಯಿಂದ ಸಮುದ್ರಕ್ಕೆ ಬಿದ್ದು ಓರ್ವ ಸಾವನ್ನಪ್ಪಿ, ಮತ್ತೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಶನಿವಾರ ತಡರಾತ್ರಿ ಮರವಂತೆಯಲ್ಲಿ ಸಂಭವಿಸಿದೆ.

ವಿರಾಜ್ ಆಚಾರ್ಯ ಆಚಾರ್ಯ (28) ಮೃತಪಟ್ಟವರು. ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಕಾರು ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಸಮುದ್ರಕ್ಕೆ ಬಿದ್ದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಓರ್ವರು ಸಾವನ್ನಪ್ಪಿದ್ದಾರೆ. ರೋಶನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಕಾರ್ತಿಕ್, ಸಂದೇಶ್‌ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಗ್ನಿಶಾಮಕ ಸಿಬಂದಿ ಸ್ಥಳಕ್ಕಾಗಮಿಸಿ ಕಾರನ್ನು ಮೇಲಕ್ಕೆತ್ತಿದ್ದಾರೆ. ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!