- Advertisement -
- Advertisement -



ರಾಯಚೂರು: ಕ್ರೂಸರ್ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ್ದು, 7 ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ ಸಂಭವಿಸಿದೆ.

ಕೂಲಿ ಕಾರ್ಮಿಕರಿದ್ದ ಕ್ರೂಸರ್ ಪಲ್ಟಿ ಹೊಡೆದು ಲಕ್ಷ್ಮೀದೇವಿ (50) ಮೃತಪಟ್ಟಿದ್ದಾರೆ. ಮಲ್ಲಪ್ಪ, ಈರಮ್ಮ(35), ಸತ್ತಮ್ಮ (30), ಯಲ್ಲಮ್ಮ (45), ನಿಂಗಮ್ಮ (45), ಗಂಗಮ್ಮ(50), ಗಂಗಮ್ಮ (40) ತೀವ್ರ ಗಾಯಗೊಂಡಿದ್ದಾರೆ.
ಮೃತರು ಹಾಗೂ ಗಾಯಾಳುಗಳು ಸಿಂಧನೂರು ತಾಲೂಕಿನ ಗಿಣಿವಾರ ಗ್ರಾಮದವರು. ಗಾಯಾಳುಗಳಿಗೆ ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹತ್ತಿ ಬಿಡಿಸಲು ಕೂಲಿ ಕೆಸಲಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.


- Advertisement -