Saturday, July 5, 2025
spot_imgspot_img
spot_imgspot_img

ಕೆಎಫ್ ಸಿಯ ಟೇಕ್ ಅವೇ ವಿಂಗ್ಸ್ ಮೀಲ್ ಆರ್ಡರ್ ಮಾಡಿದ ಮಹಿಳೆಗೆ ಸಿಕ್ಕಿತು ಗರಿ-ಗರಿಯಾದ ಕರಿದ ‘ಕೋಳಿ ತಲೆ’..!

- Advertisement -
- Advertisement -

ಇತ್ತೀಚೆಗೆ ಅನೇಕ ವಿಡಿಯೋ, ಫೋಟೋ ಹೀಗೆ ಹಲವು ಆಹಾರಗಳ ಕಲಬೆರಕೆ ಬಗ್ಗೆ ಮಾಹಿತಿ ಹೊರ ಬೀಳುತ್ತಲೆ ಇದೆ. ಬೀದಿ ಬದಿ ವ್ಯಾಪಾರಿಗಳು ತಯಾರಿಸಿದ ಆಹಾರದಲ್ಲಿ ಕೊಳಕು ನೀರು ಉಪಯೋಗಿಸುವುದರಿಂದ ಹಿಡಿದು ಜ್ಯೂಸ್ ಬಾಟಲಿಗಳಲ್ಲಿ ಮಿರಿ-ಮಿರಿ ಮಿಂಚೋ ಹುಳದಿಂದ ಹಿಡಿದು ಎಲ್ಲಾ ಆಹಾರಗಳ ಬಂಡವಾಳದ ವಿಡಿಯೋ ವೈರಲ್ ಆಗೇ ಇದೆ. ಆದ್ರೆ ಇಲ್ಲೊಂದು ಕಡೆ ಆರ್ಡರ್ ಮಾಡಿದ ಫುಡ್ ನಲ್ಲಿ ಇತ್ತು ಕೋಳಿ ತಲೆ

ಹೌದು ತುಂಬಾ ಜನರಿಗೆ ಫುಡ್ ಆರ್ಡರ್ ಮಾಡಿ ಮನೆಯಲ್ಲೇ ಸವಿಯೋ ಆಸೆ. ಉತ್ತಮ ಕ್ವಾಲಿಟಿ ಫುಡ್ ಅನ್ನೇ ಆರ್ಡರ್ ಮಾಡುತ್ತಾರೆ.ಅದರಲ್ಲೂ ಕೆಎಫ್ ಸಿ ಸ್ವಲ್ಪ ಮಟ್ಟಿಗಾದರೂ ಹೆಚ್ಚಿನ ಗ್ರಾಹಕರ ಮನಮೆಚ್ಚಿದೆ. ಆದ್ರೆ ಇಲ್ಲಿ ಕೆಎಫ್ ಸಿ ಮಾಡಿದ ಎಡವಟ್ಟು ನೋಡಿದ್ರೆ ಇನ್ನು ಇದನ್ನು ತಿನ್ನಬೇಕೆ? ಎಂಬ ಪ್ರಶ್ನೆ ಹುಟ್ಟೋದಂತೂ ಖಚಿತ.

vtv vitla
vtv vitla

ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೊಕ್ಕಿನೊಂದಿಗೆ ಪೂರ್ಣ ಕೋಳಿಯ ತಲೆಯನ್ನು ಕಂಡು ಮಹಿಳೆ ಆಘಾತಕ್ಕೊಳಗಾದ ಘಟನೆ ಯುಕೆನಲ್ಲಿ ನಡೆದಿದೆ.

ಗೇಬ್ರಿಯೆಲ್ ಎಂದು ಗುರುತಿಸಲಾದ ಗ್ರಾಹಕರು, ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್‌ನಲ್ಲಿರುವ ಕೆಎಫ್‌ಸಿ ಔಟ್‌ಲೆಟ್‌ನಿಂದ ಟೇಕ್‌ ಅವೇ ಊಟವನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ತನ್ನ ಹಾಟ್ ವಿಂಗ್ಸ್ ಮೀಲ್‌ನಲ್ಲಿ ಫ್ರೈಡ್ ಚಿಕನ್ ಹೆಡ್ ಅನ್ನು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ. ಇದರ ಫೋಟೋ ಕ್ಲಿಕ್ಕಿಸಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಳಿಯ ಕಣ್ಣುಗಳು ಮತ್ತು ಕೊಕ್ಕಿನಿಂದ ಸಂಪೂರ್ಣ ತಲೆಯಿರುವುದನ್ನು ಫೋಟೋದಲ್ಲಿ ನೋಡಬಹುದು.ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಚಿತ್ರ ನೋಡಿದ ನೆಟ್ಟಿಗರು ಕೂಡ ದಿಗ್ಭ್ರಮೆಗೊಂಡಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!