Thursday, July 30, 2026
spot_imgspot_img
spot_imgspot_img

ಕೆದಿಲ: ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿ ಖಾನೆಗೆ ಹಿಂ.ಜಾ.ವೇದಿಕೆ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ; ಓರ್ವ ಆರೋಪಿ ಹಾಗೂ ಗೋ ಮಾಂಸ ಪೋಲಿಸ್ ವಶಕ್ಕೆ

- Advertisement -
- Advertisement -

ಕೆದಿಲ ಸತ್ತಿಕಲ್ಲು ವ್ಯಾಪ್ತಿಯ ಹಲವು ಕಡೆಗಳಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಗೋ ಕಸಾಯಿಕಾನೆಗಳು ಹಲವು ವರುಷಗಳಿಂದ ನಡೆಯುತ್ತಿದ್ದು ಹಲವು ಬಾರಿ ಪೋಲೀಸರು ವಶಪಡಿಸಿದರೂ ಮತ್ತೆ ಮತ್ತೆ ನಡೆಯುತ್ತಲೇ ಇದೆ.

ಇಂದು ಸತ್ತಿಕಲ್ಲು ಬೈಲು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯ ಬಳಿ ಹಲವು ಸಮಯದಿಂದ ನಡೆಸುತ್ತಿರುವ ಅಕ್ರಮ ಕಸಾಯಿಖಾನೆಗೆ ಹಿಂದು ಜಾಗರಣ ವೇದಿಕೆಯ ಮಾಹಿತಿ ಮೇರೆಗೆ
ಪುತ್ತೂರು ನಗರ ಠಾಣೆಯ ತಂಡ ದಾಳಿ ನಡೆಸಿದ್ದು. ಅಂದಾಜು 70 ಕೆಜಿ ಗೂ ಹೆಚ್ಚಿನ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ.

ಗೋವನ್ನು ಕಟಾವ್ ಮಾಡುತ್ತಿದ್ದ
ಆರೋಪಿಯನ್ನು ಬಂದಿಸಲಾಗಿದೆ. ಓಡಿದವರನ್ನು ಪತ್ತೆಹಚ್ಚಲಾಗುತ್ತಿದೆ.

ಈ ಅಕ್ರಮ ಕೃತ್ಯವನ್ನು ಹಿಂದುಜಾಗರಣ ವೇದಿಕೆ ಕಂಡಿಸುತ್ತದೆ.ಹಾಗು ಅಪರಾದಿಯನ್ನು ಬಂದಿಸಿದ ಪೋಲೀಸು ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇವೆ. ಕೆದಿಲ ಗ್ರಾಮದಲ್ಲಿ ನಡೆಯುವ ಇನ್ನೂ ಹೆಚ್ಚಿನ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆರಕ್ಷಕರಲ್ಲಿ ಮನವಿ ಮಾಡುತ್ತೇವೆ ಎಂದು ಹಿಂದು ಜಾಗರಣ ವೇದಿಕೆಯ ವಿಟ್ಳ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಆಗ್ರಹಿಸಿದರು.

- Advertisement -

Related news

error: Content is protected !!