Thursday, May 2, 2024
spot_imgspot_img
spot_imgspot_img

ಕೊರೊನಾ ಪೆಡಂಭೂತ ಓಡಿಸಲು ಗ್ರಾಮಸ್ಥರಿಂದ ಅಹೋರಾತ್ರಿ ಭಜನೆ, ಕೊರೊನಾ ಮೂರ್ತಿಯ ಶವಸಂಸ್ಕಾರ

- Advertisement -G L Acharya panikkar
- Advertisement -
vtv vitla
vtv vitla
vtv vitla

ದಾವಣಗೆರೆ: ಕೊರೊನಾ ಪೆಡಂಭೂತ ಮತ್ತೊಮ್ಮೆ ನಾಡನ್ನು ಬಾಧಿಸಲು ಸಜ್ಜಾದಂತಿದೆ. ಕೊರೊನಾ ಕ್ರಿಮಿಯನ್ನು ಹೇಗಾದರೂ ಮಾಡಿ ಕಟ್ಟಿಹಾಕಲು ಸರ್ಕಾರ ಸಹ ನಿನ್ನೆಯಷ್ಟೇ ಸಾಕಷ್ಟು ಬಿಗಿ ಕ್ರಮಗಳನ್ನು ಘೋಷಿಸಿದೆ.

ಈ ಹಿಂದಿನ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಶತಾಯಗತಾಯ ಅದನ್ನು ಆರಂಭದಲ್ಲಿಯೇ ಚಿವುಟಿಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಜ್ಜಾಗಿದೆ. ಈ ಮಧ್ಯೆ, ಗ್ರಾಮೀಣ ಭಾಗದ ಜನ ತಮ್ಮದೇ ಆದ ರೀತಿಯಲ್ಲಿ ಕೊರೊನಾ ಆತಂಕದಿಂದ ಪಾರಾಗಲು ನಾನಾ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಂತಹ ಒಂದು ಪ್ರಯತ್ನ ಸೋಮವಾರ ರಾತ್ರಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನೆರವೇರಿದೆ.

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮಸ್ಥರು ಕೊರೊನಾ ನಿಯಂತ್ರಣಕ್ಕೆ ಮೊದಲು ಕೊರೊನಾ ಮೂರ್ತಿಯೊಂದನ್ನು ಸಿದ್ಧಪಡಿಸಿದ್ದಾರೆ. ಆ ನಂತರ ಕೊರೊನಾ ಮೂರ್ತಿಯ ಎದುರು ಅಹೋರಾತ್ರಿ ಭಜನೆ ಮಾಡಿದ್ದಾರೆ. ಮತ್ತಿಹಳ್ಳಿ ಗ್ರಾಮದ ಕಾಳಿಕಾಂಭಿಕಾ ದೇವಿ ಪುಣ್ಯಕ್ಷೇತ್ರದಲ್ಲಿ ಭಜನೆ ನಂತರ, ಮೆರವಣಿಗೆ ಮೂಲಕ‌‌ ಕೊರೊನಾ ಮೂರ್ತಿಯ ಶವ ಸಂಸ್ಕಾರವನ್ನೂ ನೆರವೇರಿಸಿದ್ದಾರೆ. ಮತ್ತಿಹಳ್ಳಿಯಲ್ಲಿ ಭಜನೆ ಮಾಡಿ ಕೊರೊನಾ ಮೂರ್ತಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಸ್ಥಳೀಯರು. ಕಂಚಿಕೆರೆ ಕ್ಷೇತ್ರದ ಬಸವರಾಜ್ ಗುರೂಜಿ ಪೂಜೆಯ ನೇತೃತ್ವ ವಹಿಸಿದ್ದರು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!