Friday, May 17, 2024
spot_imgspot_img
spot_imgspot_img

ಕೊರೊನಾ ಮಣಿಸಲು ಸಿದ್ದಗೊಂಡ ಮತ್ತೊಂದು ವ್ಯಾಕ್ಸಿನ್‌; ಕೇಂದ್ರದಿಂದ ಮೂಗಿನ ಲಸಿಕೆಗೆ ಅನುಮೋದನೆ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕೇಂದ್ರ ಸರ್ಕಾರವು ಮೂಗಿನ ಲಸಿಕೆಯನ್ನು ಅನುಮೋದಿಸಿದ್ದು ಈ ಲಸಿಕೆ ಬೂಸ್ಟರ್ ಡೋಸ್ ಆಗಿ ಲಭ್ಯವಾಗಲಿದ್ದು, ಇದು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ.

ಚುಚ್ಚುಮದ್ದುಗಳಿಗೆ ಹಿಂಜರಿಯುವ ಜನರಿಗೆ ಮೂಗಿನ ಮೂಲಕ ಲಸಿಕೆ ಹಾಕುವುದಾಗಿದೆ. ಮೂಗಿನ ಲಸಿಕೆಗಳು ಚುಚ್ಚುಮದ್ದಿಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ.

ಪ್ರಧಾನಿ ನಾಯಕತ್ವದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೇರಿದ ಹಲವು ಗಣ್ಯರಿದ್ದ ಸಭೆಯಲ್ಲಿ ಈ ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಮೂಗಿನ ಲಸಿಕೆಗಳು ಚುಚ್ಚುಮದ್ದಿಗೆ ಹೋಲಿಸಿದರೆ ಅನೇಕ ಪ್ರಯೋಜನಗಳನ್ನು ಹೊಂದಿವೆ. ಶೇಖರಣೆ, ವಿತರಣೆ ಮತ್ತು ಕಡಿಮೆ ತ್ಯಾಜ್ಯ ಉತ್ಪಾದನೆಯ ಜೊತೆಗೆ, ಮೂಗಿನ ಲಸಿಕೆಗಳು ವೈರಸ್‌ನ ಪ್ರವೇಶ ಬಿಂದುಗಳಲ್ಲಿ -ಮೂಗು ಅಥವಾ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ರಕ್ಷಣೆ ನೀಡುತ್ತವೆ‌ ಎಂದು ವರದಿ ತಿಳಿಸಿದೆ.

- Advertisement -

Related news

error: Content is protected !!