Thursday, July 3, 2025
spot_imgspot_img
spot_imgspot_img

ಕೊವಿಡ್ ಬಳಿಕದ ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಸದಸ್ಯ ರಾಷ್ಟ್ರಗಳ ಸಹಕಾರ ಸಹಾಯ ಮಾಡಬಲ್ಲದು: ಪ್ರಧಾನಿ ಮೋದಿ

- Advertisement -
- Advertisement -

ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಗುಂಪಿನ ಸದಸ್ಯ ರಾಷ್ಟ್ರಗಳು ಕಳೆದ ಕೆಲವು ವರ್ಷಗಳಿಂದ ರಚನಾತ್ಮಕ ಬದಲಾವಣೆಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದು ಅದು ಸಂಸ್ಥೆಯ ಪ್ರಭಾವವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಚೀನಾ ಆಯೋಜಿಸಿದ 14 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಮೋದಿ ಅವರು, ಹಲವಾರು ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವು ನಮ್ಮ ನಾಗರಿಕರಿಗೆ ಪ್ರಯೋಜನವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು. ವಾರ್ಷಿಕ ಸಮಾರಂಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಉನ್ನತ ನಾಯಕರು ಭಾಗಿಯಾಗಿದ್ದಾರೆ.ಜಾಗತಿಕ ಆರ್ಥಿಕತೆಯ ಆಡಳಿತಕ್ಕೆ ಸಂಬಂಧಿಸಿದಂತೆ ಬ್ರಿಕ್ಸ್ ಸದಸ್ಯರು ಇದೇ ವಿಧಾನವನ್ನು ಹೊಂದಿದ್ದಾರೆ. ನಮ್ಮ ಪರಸ್ಪರ ಸಹಕಾರವು ಜಾಗತಿಕ ನಂತರದ ಕೋವಿಡ್ ಚೇತರಿಕೆಗೆ ಉಪಯುಕ್ತ ಕೊಡುಗೆಯನ್ನು ನೀಡಬಲ್ಲದು. ಇಂದು ನಮ್ಮ ಚರ್ಚೆಗಳು ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಲಹೆಗಳನ್ನು ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ಮೋದಿಹೇಳಿದ್ದಾರೆ.

ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರದ ಮೂಲಕ ನಾಗರಿಕರು ಪ್ರಯೋಜನ ಪಡೆದ ಹಲವಾರು ಕ್ಷೇತ್ರಗಳಿವೆ. ಬ್ರಿಕ್ಸ್ ಯುವ ಶೃಂಗಸಭೆಗಳು, ಬ್ರಿಕ್ಸ್ ಕ್ರೀಡೆಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಥಿಂಕ್-ಟ್ಯಾಂಕ್‌ಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಮೂಲಕ, ನಾವು ನಮ್ಮ ಜನರಿಂದ ಜನರ ಸಂಪರ್ಕವನ್ನು ಬಲಪಡಿಸಿದ್ದೇವೆ. ಬ್ರಿಕ್ಸ್‌ನ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಸದಸ್ಯತ್ವ ಹೆಚ್ಚಿರುವುದು ಸಂತೋಷದ ವಿಷಯ ಎಂದು ಮೋದಿ ಹೇಳಿದರು.

ಬುಧವಾರ ಬ್ರಿಕ್ಸ್ ಬಿಸಿನೆಸ್ ಫೋರಮ್‌ನ ಉದ್ಘಾಟನಾ ಸಮಾರಂಭದಲ್ಲಿ ಕೊವಿಡ್ ನಂತರದ ಚೇತರಿಕೆಯ ಮೇಲೆ ಜಾಗತಿಕವಾಗಿ ಗಮನಹರಿಸುವ ಬಗ್ಗೆ ಪ್ರಧಾನ ಮಂತ್ರಿ ಬ್ರಿಕ್ಸ್ ದೇಶಗಳ ಪಾತ್ರವನ್ನು ಒತ್ತಿಹೇಳಿದರು. “ಈ ಉದಯೋನ್ಮುಖ ಆರ್ಥಿಕತೆಗಳ ಸಮೂಹವು ಜಾಗತಿಕ ಬೆಳವಣಿಗೆಯ ಎಂಜಿನ್‌ಗಳಾಗಿ ಹೊರಹೊಮ್ಮಬಹುದು ಎಂಬ ನಂಬಿಕೆಯೊಂದಿಗೆ ಬ್ರಿಕ್ಸ್ ಅನ್ನು ಸ್ಥಾಪಿಸಲಾಗಿದೆ. ಇಂದು ಕೊವಿಡ್ ನಂತರದ ಚೇತರಿಕೆಯತ್ತ ಜಗತ್ತು ಗಮನಹರಿಸುತ್ತಿರುವಾಗ, ಬ್ರಿಕ್ಸ್ ದೇಶಗಳ ಪಾತ್ರವು ಬಹಳ ಮುಖ್ಯವಾಗಿರುತ್ತದೆ” ಎಂದು ಪಿಎಂ ಮೋದಿ ಹೇಳಿದ್ದಾರೆ.

- Advertisement -

Related news

error: Content is protected !!