Friday, May 10, 2024
spot_imgspot_img
spot_imgspot_img

ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೇನು….?

- Advertisement -G L Acharya panikkar
- Advertisement -

ತಜ್ಞರ ಪ್ರಕಾರ, ಎಲ್ಲಾ ರೀತಿಯ ಖರ್ಜೂರವು ಮಾನವನ ದೇಹಕ್ಕೆ  ಬಹಳ ಪ್ರಯೋಜನಕಾರಿಯಗಿದೆ.

ರೋಗನಿರೋ‘ಕ ಶಕ್ತಿಯನ್ನು ಹೆಚ್ಚಿಸಲು ಖರ್ಜೂರ ಸೇವಿಸಬೇಕು. ನಿಮಗೆ ಶೀತ ಸಮಸ್ಯೆ ಮುಂದುವರಿದರೆ, ಒಂದು ಗ್ಲಾಸ್ ಹಾಲಿನಲ್ಲಿ ೫-೬ ಖರ್ಜೂರ ಸೇರಿಸಿ, ಐದು ಕರಿಮೆಣಸು, ಒಂದು ಏಲಕ್ಕಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಮತ್ತು ಅದನ್ನು ಕುದಿಸಿ. ರಾತ್ರಿಯಲ್ಲಿ ಮಲಗುವ ಮುನ್ನ ಇದನ್ನು ಕುಡಿಯುವುದರಿಂದ ಶೀತ ಮತ್ತು ನೆಗಡಿಗೆ ಪರಿಹಾರ ಸಿಗುತ್ತದೆ. 

ಚಳಿಗಾಲದಲ್ಲಿ ಸಂಧಿವಾತದ ನೋವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಖರ್ಜೂರದ ಸೇವನೆ ಈ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದಲ್ಲದೆ, ಪಾರ್ಶ್ವವಾಯು ಮತ್ತು ಎದೆ ನೋವಿನ ಸಮಸ್ಯೆಗಳನ್ನು ನಿವಾರಿಸಲು ಖರ್ಜೂರ ಸಹಕಾರಿಯಾಗಿದೆ.

 ಖರ್ಜೂರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಅಂಶಗಳಿವೆ. ಇದು ಮಲಬದ್ಧತೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ರಾತ್ರಿಯಲ್ಲಿ ಮಲಗುವ ಮುನ್ನ ಕೆಲವು ಖರ್ಜೂರಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನಿರಿ. ಇದರಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಾಣಬಹುದು.

ರಕ್ತಹೀನತೆಯಿಂದ ಬಳಲುತ್ತಿದ್ದರೆ ನೀವು ಪ್ರತಿನಿತ್ಯ ರಾತ್ರಿ ಖರ್ಜೂರವನ್ನು ನೆನೆಸಿಟ್ಟು, ಬೆಳಿಗ್ಗೆ ಹಾಲು ಅಥವಾ ತುಪ್ಪದೊಂದಿಗೆ ತಿನ್ನುವುದು ಪ್ರಯೋಜನಕಾರಿ. ಇದಲ್ಲದೆ, ೩-೪ ಖರ್ಜೂರಗಳನ್ನು ಬಿಸಿ ನೀರಿನಲ್ಲಿ ತೊಳೆದು ಹಸುವಿನ ಹಾಲಿನೊಂದಿಗೆ ಕುದಿಸಿ, ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ ಕಾಣಬಹುದು.

ಹಸಿವು ಕಡಿಮೆ ಸಮಸ್ಯೆಗಳಿದ್ದರೆ , ಹಸಿವನ್ನು ಹೆಚ್ಚಿಸಲು ನೀವು  ಖರ್ಜೂರದ ತಿರುಳನ್ನು ತೆಗೆದು ಹಾಲಿನಲ್ಲಿ ಬೇಯಿಸಬೇಕು. ಇದರ ನಂತರ, ಅದನ್ನು ತಣ್ಣಗಾಗಿಸಿ ಮತ್ತು ಪುಡಿಮಾಡಿ. ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಹಸಿವು ಹೆಚ್ಚಾಗುತ್ತದೆ. ಹಾಗೆಯೇ ಜೀರ್ಣಕ್ರಿಯೆ ಕೂಡ ಉತ್ತಮಗೊಳ್ಳುತ್ತದೆ.

* ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
* ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.
* ಮೂಳೆಗಳನ್ನು ಬಲಪಡಿಸುತ್ತದೆ.
* ರಕ್ತಹೀನತೆಯನ್ನು ತಡೆಯುತ್ತದೆ.
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
* ದೇಹಕ್ಕೆ ಕಬ್ಬಿನಾಂಶ ಒದಗಿಸುತ್ತದೆ.
* ದೊಡ್ಡ ಕರುಳಿನ ಸಮಸ್ಯೆ ಕಡಿಮೆ ಮಾಡುತ್ತದೆ.

- Advertisement -

Related news

error: Content is protected !!