Friday, June 27, 2025
spot_imgspot_img
spot_imgspot_img

ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಭೀಕರ ಅಗ್ನಿ ದುರಂತ; 20 ಮಂದಿ ಸಜೀವ ದಹನ

- Advertisement -
- Advertisement -

ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೨೦ ಮಂದಿ ಅಸುನೀಗಿದ ಘಟನೆ ನಡೆದಿದೆ. ರಷ್ಯಾದ ಸೈಬೀರಿಯಾದ ಕೆಮೆರೊವೊ ನಗರದಲ್ಲಿ ಈ ಭಾರೀ ಅವಘಡ ಸಂಭವಿಸಿದಾಗಿ ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ.

ಮಾಸ್ಕೊದಿಂದ ಪೂರ್ವಕ್ಕೆ 3 ಸಾವಿರ ಕಿಮೀ ದೂರದಲ್ಲಿರುವ ಕೆಮೆರೊವೊ ನಗರದಲ್ಲಿ ಎರಡು ಅಂತಸ್ತಿನ ನರ್ಸಿಂಗ್ ಹೋಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. . ಎರಡು ಅಂತಸ್ತಿನ ಮರದ ಕಟ್ಟಡದ ಸಂಪೂರ್ಣ ಮೇಲಿನ ಮಹಡಿ ರಾತ್ರಿಯ ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಬೆಂಕಿ ಹೊತ್ತಿಕೊಂಡಾಗ ನರ್ಸಿಂಗ್ ಹೋಂನಲ್ಲಿ ಎಷ್ಟು ಜನರು ಇದ್ದರು ಎಂಬುದೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದೆ. ಕಾರ್ಯಾಚರಣೆ ಮುಂದುವರಿಸಿದೆ. ೨೦ ಮಂದಿ ಅಸುನೀಗಿದ್ದು ಆರಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!