Monday, August 31, 2026
spot_imgspot_img
spot_imgspot_img

ಖಾಸಗಿ ರೆಸಾರ್ಟ್​ನ ವಿಲ್ಲಾದಲ್ಲಿ ದಂಪತಿಯ ಬರ್ಬರ ಹತ್ಯೆ; ಮನೆಗೆಲಸದ ವ್ಯಕ್ತಿ ಕೊಲೆ ಮಾಡಿ ಪರಾರಿ

- Advertisement -
- Advertisement -

ರಾಮನಗರ: ಇಲ್ಲಿನ ಖಾಸಗಿ​ ರೆಸಾರ್ಟ್​ನ ವಿಲ್ಲಾದಲ್ಲಿ ದಂಪತಿ ಬರ್ಬರ ಹತ್ಯೆಯಾದ ದುರ್ಘಟನೆ ಸಂಭವಿಸಿದೆ. ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ರೆಸಾರ್ಟ್​ನಲ್ಲಿ ನಿವೃತ್ತ ಪೈಲಟ್ ರಘುರಾಜ್ (70), ಪತ್ನಿ ಆಶಾ (63) ಕೊಲೆಯಾಗಿದ್ದಾರೆ.

vtv vitla
vtv vitla

ಭಾರತೀಯ ವಾಯುಸೇನೆಯ ನಿವೃತ್ತ ಪೈಲಟ್​ ರಘುರಾಜ್ ಹಾಗೂ ಪತ್ನಿಯನ್ನು ಬಿಹಾರ ಮೂಲದ ಮನೆಗೆಲಸದ ವ್ಯಕ್ತಿಯಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮೊದಲ ಮಹಡಿಯಲ್ಲಿ ಪತಿ ಹಾಗೂ ನೆಲಮಹಡಿಯಲ್ಲಿ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಆರೋಪಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!