Tuesday, July 1, 2025
spot_imgspot_img
spot_imgspot_img

ಗಂಗೊಳ್ಳಿ: ಗೋಹತ್ಯೆ ವಿರೋಧಿಸಿ ನಡೆದ ಹೋರಾಟದ ಬಳಿಕ ಮಾರುಕಟ್ಟೆಗೆ ಬಂದು ಮೀನು ಖರೀದಿಸುವುದನ್ನು ತಡೆಯುತ್ತಿರುವ ಅನ್ಯಕೋಮಿನ ಯುವಕರು

- Advertisement -
- Advertisement -
driving

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಅ.1ರಂದು ಗೋಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆ ಬಳಿಕ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಅನ್ಯಕೋಮಿನವರು ಮೀನು ಖರೀದಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ಕಳೆದ ಮೂರು ದಿನಗಳಿಂದ ಮೀನು ಖರೀದಿಸುವವರಿಲ್ಲದೆ ಮಾರುಕಟ್ಟೆ ಬಣಗುಡುತ್ತಿದೆ.

ಗಂಗೊಳ್ಳಿ ಮಾರುಕಟ್ಟೆಯಲ್ಲಿ ಮೀನು ಖರೀದಿಸಬಾರದು ಎಂದು ಮುಸ್ಲಿಂ ಸಂಘಟನೆ ಮುಖಂಡರು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೀನು
ಖರೀದಿಗೆ ಬರುವ ತಮ್ಮ ಕೋಮಿನ ಜನರನ್ನು
ವಾಪಸು ಕಳುಹಿಸುತ್ತಿರುವ ಯುವಕರ ವಿರುದ್ಧ
ಮಹಿಳಾ ಮೀನುಗಾರರು ಗಂಗೊಳ್ಳಿ ಪೊಲೀಸ್
ಠಾಣೆಗೆ ದೂರು ನೀಡಲು ತೆರಳಿದ್ದು, ಪೊಲೀಸ್
ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹಿಂದೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಹಿಂದೂ ಜಾಗರಣ ವೇದಿಕೆ ಗೋಹತ್ಯೆ ವಿರೋಧಿಸಿ ಪ್ರತಿಭಟನೆಗೆ ಉತ್ತರವಾಗಿ ಮಹಿಳಾ ಮೀನುಗಾರರಿಂದ ಮೀನು ಖರೀದಿಸಬಾರದು ಎಂಬ ಸೂಚನೆ ಮುಖಂಡರಿಂದ ಪರೋಕ್ಷವಾಗಿ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಮೂರು ದಿನಗಳಿಂದ ಮೀನು ಮಾರಾಟ ಆಗದೆ ಸಾವಿರಾರು ರೂಪಾಯಿ ಮೌಲ್ಯದ ಮೀನು ಕೊಳೆತು ಹೋಗುತ್ತಿದೆ ಎನ್ನುತ್ತಾರೆ ಮೀನು ಮಾರಾಟದ ಮಹಿಳೆಯರು.

- Advertisement -

Related news

error: Content is protected !!