Tuesday, May 14, 2024
spot_imgspot_img
spot_imgspot_img

ಚರ್ಮದ ಕಾಂತಿ ಹೆಚ್ಚಿಸುವ 7 ಹಣ್ಣುಗಳು ಉಪಯೋಗದ ಟಿಪ್ಸ್

- Advertisement -G L Acharya panikkar
- Advertisement -

ಬೇಸಿಗೆ ಕಾಲ ಬಂದ್ರೆ ಜನರಿಗೆ ಒಂದಲ್ಲ ಒಂದು ರೀತಿ ಸಮಸ್ಯೆ ಕಾಡುತ್ತೆ. ಒಂದು ಕಡೆಯಿಂದ ಸಿಕ್ಕಾಪಟ್ಟೆ ಸೆಕೆ. ಫ್ಯಾನ್‌, ಎಸಿ ಅಥವಾ ಕೂಲರ್‌ ಇಲ್ಲದೆ ಈ ಬೇಸಿಗೆಯಲ್ಲಿ ಬದುಕೋದೇ ಕಷ್ಟ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ದೇಹವನ್ನು ಹೈಡ್ರೇಟ್‌ ಆಗಿಡೋದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ.

ಕಲ್ಲಂಗಡಿ ಹಣ್ಣು;
ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ನಮ್ಮನ್ನು ಹೈಡ್ರೇಟ್‌ ಆಗಿರಿಸಲು ಸಹಕರಿಸುವ ಅತ್ಯುತ್ತಮ ಹಣ್ಣು ಅಂದ್ರೆ ತಪ್ಪಾಗೋದಿಲ್ಲ. ಇದ್ರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್‌ ಅಂಶವಿದ್ದು, ಇದ್ರ ಜೊತೆಗೆ ಶೇಕಡಾ 92% ರಷ್ಟು ನೀರಿನಾಂಶವಿದೆ. ಇನ್ನೂ ಈ ಹಣ್ಣಿನಲ್ಲಿ ವಿಟಮಿನ್‌ ಸಿ, ಬಿ6, ಬಿ1 ಮತ್ತು ಲಿಕೋಪೆನ್‌ ಅಂಶವಿದ್ದು ಇದು ನಿಮ್ಮ ಚರ್ಮವನ್ನು ಕಾಂತಿಯುವಾಗಲು ಸಹಕರಿಸುತ್ತದೆ. ಹೀಗಾಗಿ ಈ ಬೇಸಿಗೆಯಲ್ಲಿ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸಿ.

  1. ಪಪ್ಪಾಯಿ ಹಣ್ಣು:
    ಪಪ್ಪಾಯಿ ಸಾಮಾನ್ಯವಾಗಿ ಎಲ್ಲಾ ಋತುಮಾನಗಳಲ್ಲೂ ಲಭ್ಯವಾಗುವ ಹಣ್ಣು. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ ಕೂದಲು ಹಾಗೂ ಚರ್ಮದ ಆರೈಕೆಗೂ ಇದು ಅತ್ಯುತ್ತಮವಾದ ಹಣ್ಣು. ಒಣ ಚರ್ಮದ ಪೋಷಣೆಗೆ ಈ ಹಣ್ಣು ಉತ್ತಮ. ಹೀಗಾಗಿ ಬೇಸಿಗೆ ಕಾಲದಲ್ಲಿ ಚರ್ಮವು ಒಣಗಿದಂತಾಗೋದ್ರಿಂದ ಇದನ್ನು ಫೇಸ್‌ ಪ್ಯಾಕ್‌ ಆಗಿ ಬಳಕೆ ಮಾಡಬಹುದು. ಇದ್ರಲ್ಲಿ ವಿಟಮಿನ್‌ ಎ,ಬಿ, ಮತ್ತು ಸಿ ಇದೆ. ಇದ್ರ ಜೊತೆಗೆ ಪೊಟಾಷಿಯಂ, ಮ್ಯಾಂಗನೀಸ್‌ ಹಾಗೂ ತಾಮ್ರದ ಅಂಶ ಕೂಡ ಇದೆ
    .
  2. ಕಿತ್ತಾಳೆ ಹಣ್ಣು;
    ನಮೆಗೆಲ್ಲಾ ಗೊತ್ತಿರೋ ಹಾಗೆ ವಿಟಮಿನ್‌ ಸಿ ಚರ್ಮದ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದ್ರಲ್ಲಿರುವ ಆಂಟಿ ಆಕ್ಸಿಡೆಂಟ್‌ ಗುಣಗಳು ಚರ್ಮವನ್ನು ಮೃದುವಾಗಿ, ಹೈಡ್ರೇಟ್‌ ಆಗಿ ಮತ್ತು ವಯಸ್ಸಾದ ಲಕ್ಷಣಗಳು ಗೋಚರಿಸದಂತೆ ಮಾಡುತ್ತದೆ. ಕಿತ್ತಾಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಂಶ ಅಧಿಕ ಪ್ರಮಾಣದಲ್ಲಿದ್ದು ಇದು ಮೊಡವೆಗಳ ವಿರುದ್ಧ ಹೋರಾಡುವುದಲ್ಲದೇ ಕಾಂತಿಯುತ ಚರ್ಮ ನಿಮ್ಮದಾಗಿಸುತ್ತದೆ.
  3. ಮಾವಿನ ಹಣ್ಣು;
    ಹಣ್ಣುಗಳ ರಾಜ ‘ಮಾವಿನ ಹಣ್ಣು’. ಇದು ಅತ್ಯದ್ಭುತವಾದ ಹಣ್ಣು. ರುಚಿಯ ವಿಚಾರಕ್ಕೆ ಬಂದ್ರೆ ಮಾವಿನ ಹಣ್ಣಿಗೆ ಸರಿಸಾಟಿಯಾದ ಹಣ್ಣು ಇಲ್ಲ ಅನ್ನಿಸುತ್ತೆ. ಬೇಸಿಗೆಯ ಕಾಲದಲ್ಲಿ ಈ ಹಣ್ಣು ಲಭ್ಯವಿದ್ದು ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ಹಣ್ಣಿನಿಂದ ಹತ್ತು ಹಲವಾರು ಲಾಭಗಳಿದೆ. ಇದ್ರಲ್ಲಿ ವಿಟಮಿನ್‌ ಸಿ, ಎ, ಬಿ6, ಕೆ, ಇ, ಪೊಟಾಶಿಯಂ, ಮ್ಯಾಂಗನೀಸ್‌ ಹಾಗೂ ತಾಮ್ರದ ಅಂಶವಿದ್ದು, ಗರ್ಭಕೋಶ, ಚರ್ಮ, ಕರುಳು ಹಾಗೂ ಸ್ತನ ಕ್ಯಾನ್ಸರ್‌ಗೆ ಈ ಹಣ್ಣು ಪರಿಣಾಮಕಾರಿಯಾಗಿದೆ.
  4. ಚೆರಿ ಹಣ್ಣು;
    ಚೆರಿ ಹೆಸರು ಕೇಳಿದ್ರೆ ಸಾಕು ಅನೇಕರಿಗೆ ಬಾಯಲ್ಲಿ ನೀರೂರುತ್ತದೆ. ಇದು ವಿಟಮಿನ್‌ ಎ,ಸಿ, ಕೆಯಿಂದ ಸಮೃದ್ಧವಾಗಿದ್ದು ಇದು ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಚೆರಿ ಹಣ್ಣನ್ನು ಸೇವಿಸೋದ್ರಿಂದ ಇದು ವಯಸ್ಸಾದಂತಹ ಲಕ್ಷಣಗಳನ್ನು ತಡೆಗಟ್ಟುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ಸೇವಿಸುವುದು ಇನ್ನಷ್ಟು ಒಳ್ಳಯದು ಹಾಗೂ ನಿದ್ರೆ ಹಾಗೂ ಚರ್ಮದ ಆರೋಗ್ಯಕ್ಕೆ ಹೇಳಿ ಮಾಡಿಸಿದ ಹಣ್ಣು.
  5. ಕೀವಿ ಹಣ್ಣು
    ಕಿವಿ ಹಣ್ಣು ಕೂಡ ವಿಟಮಿನ್‌ ಸಿ ಯಿಂದ ಸಮೃದ್ಧವಾಗಿದೆ. ಇದರಲ್ಲಿ ಕೊಲಜಿನ್‌ ಉತ್ಪಾದಿಸುವ ಅಂಶವಿದ್ದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಇದು ದೇಹವನ್ನು ಹೈಡ್ರೇಟ್‌ ಆಗಿಡಲು ಸಹಕರಿಸುತ್ತದೆ. ಇದಿಷ್ಟೇ ಅಲ್ಲದೇ ಕಿವಿಹಣ್ಣು ತಿನ್ನುವುದರಿಂದ ದೇಹದಲ್ಲಿ ಕಿರುತಟ್ಟೆಗಳು ಕೂಡ ಹೆಚ್ಚಾಗುತ್ತದೆ.
  6. ಸೇಬು ಹಣ್ಣು
    ಸೇಬು ಹಣ್ಣಗಳನ್ನು ಪ್ರತಿನಿತ್ಯ ಸೇವಿಸೋದ್ರಿಂದ ನಿಮ್ಮ ತ್ವಚೆಯ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಈ ಹಣ್ಣಿನಿಂದ ಮಾಡಿದ ಆಪಲ್ ಸೈಡರ್ ವಿನೆಗರ್ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಮುಖದ ಮೇಲಿನ ರಂಧ್ರ, ಕಪ್ಪು ಕಲೆಗಳು ಹಾಗೂ ಮೊಡವೆಯನ್ನು ನಿವಾರಿಸುತ್ತದೆ. ಕೆಲವರಿಗೆ ನೇರವಾಗಿ ಸೇಬು ಹಣ್ಣನ್ನು ತಿನ್ನೋದಕ್ಕೆ ಇಷ್ಟವಾಗೋದಿಲ್ಲ ಅಂತವರು ಜ್ಯೂಸ್‌ ಮಾಡಿಕೊಂಡು ಕುಡಿದು ಇದರ ಪ್ರಯೋಜನ ಪಡೆದುಕೊಳ್ಳಬಹುದು.
    ಆರೋಗ್ಯದ ದೃಷ್ಟಿಯಿಂದ ಗಮನಿಸುತ್ತಾ ಹೋದರೆ ಹಣ್ಣುಗಳು ತುಂಬಾನೇ ಒಳ್ಳೆಯದು. ಆದರೆ ಜನ ಹಣ್ಣು-ಹಂಪಲಿಗಿಂತ ಹೆಚ್ಚಾಗಿ ಹೊರಗಿನ ಖಾದ್ಯಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ನಾವು ಹಣ್ಣುಗಳನ್ನು ಎಷ್ಟು ತಿನ್ನುತ್ತೇವೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ.
- Advertisement -

Related news

error: Content is protected !!