Friday, May 17, 2024
spot_imgspot_img
spot_imgspot_img

ಚೌತಿ ಸಂದರ್ಭ ಶಾಂತಿಭಂಗ ಸಾಧ್ಯತೆ; ಇಬ್ಬರು ರೌಡಿಶೀಟರ್‌ಗಳಿಗೆ ಒಂದು ತಿಂಗಳವರೆಗೆ ಗಡಿಪಾರು

- Advertisement -G L Acharya panikkar
- Advertisement -

ಶಿವಮೊಗ್ಗ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಭಂಗಕ್ಕೆ ಯತ್ನಿಸುವ ಶಂಕೆ ಮೇಲೆ ಇಬ್ಬರು ರೌಡಿಶೀಟರ್ ಗಳನ್ನು ಒಂದು ತಿಂಗಳವರೆಗೆ ಗಡಿಪಾರು ಮಾಡಿ ಗುರುವಾರ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ.

ಆಶ್ರಯ ಬಡಾವಣೆಯ ಶಮಂತ ನಾಯ್ಕ (29)ಮತ್ತು ಸಂದೀಪ್ ಕುಮಾರ್ (29) ಗಡಿಪಾರು ಆದವರು. ಇವರು ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆ ಪ್ರದರ್ಶಿಸುತ್ತ, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಅಪರಾಧ ಕೃತ್ಯಗಳನ್ನೆಸಗಿ, ದುರ್ನಡತೆ ಮುಂದುವರಿಸಿಕೊಂಡು ಬಂದಿದ್ದರು. ಶಮಂತ್ ಮೇಲೆ 15 ಮತ್ತು ಸಂದೀಪ್ ಮೇಲೆ 10 ಪ್ರಕರಣಗಳಿದ್ದು ಇಬ್ಬರೂ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್​​ಗಳಾಗಿದ್ದಾರೆ.

ಇವರು ಗಣಪತಿ ಹಬ್ಬದ ಸಮಯದಲ್ಲಿಯೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟು ಮಾಡುವ ಸಾಧ್ಯತೆಗಳಿವೆ. ಎಚ್ಚರಿಕೆ ನೀಡಿದರೂ ತಮ್ಮ ನಡಾವಳಿಕೆ ಬದಲಿಸಿಕೊಳ್ಳದ ಕಾರಣ ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಇಬ್ಬರನ್ನು ಗಡಿಪಾರು ಮಾಡುವಂತೆ ಎಸ್ಪಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರು ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡಿದ್ದರು. ಅದರಂತೆ ಗುರುವಾರದಿಂದ ಸೆಪ್ಟೆಂಬರ್ 25ರವರೆಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.

vtv vitla
- Advertisement -

Related news

error: Content is protected !!