Thursday, April 25, 2024
spot_imgspot_img
spot_imgspot_img

ಜಾತ್ರೆಯಲ್ಲಿ ಪಟಾಕಿಯ ಕಿಡಿ ಸೋಕಿ ಹೊತ್ತಿ ಉರಿದ ದೇವರ ರಥ..!!

- Advertisement -G L Acharya panikkar
- Advertisement -
suvarna gold

ಬೆಳಗಾವಿ: ರಥೋತ್ಸವದ ವೇಳೆ ಪಟಾಕಿ ಸಿಡಿದು ರಥದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ನಡೆದಿದೆ.

vtv vitla

ಶಿವಪೇಟೆಯಲ್ಲಿ ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38ನೇ ವರ್ಷದ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಸ್ಥಳದಲ್ಲಿ ಕೆಲ ಭಕ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಕಿಡಿ ರಥದ ಮೇಲ್ಭಾಗಕ್ಕೆ ತಾಕಿದ ಪರಿಣಾಮ ರಥಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಬೆಂಕಿಯನ್ನು ಹರಸಾಹಸಪಟ್ಟು ನಂದಿಸಿದ್ದಾರೆ. ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

vtv vitla
vtv vitla
- Advertisement -

Related news

error: Content is protected !!